ಕಿನ್ನಿಗೋಳಿ: ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು, ಶ್ರೀರಾಮ ಯುವಕ ವೃಂದ (ರಿ.) ಗೋಳಿ ಜೋರ ಮತ್ತು ಹರಿಹರ ಶ್ರೀರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನ ಗೋಳಿ ಜೋರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವು ನಡೆಯಿತು. ಶಿಬಿರದಲ್ಲಿ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಾರನಾಥ್ ಶೆಟ್ಟಿ ಖ್ಯಾತ ವೈದ್ಯ ಡಾ. ನಿತ್ಯಾನಂದ ಚೌಟ, ಡಾ. ಸುಧೀಂದ್ರ ಕಾರ್ನಾಡ್, ಡಾ. ರಕ್ಷಿತ್, ಡಾ. ರಶ್ಮಿ, ಡಾ. ಸಾರ, ಕೋ ಆರ್ಡಿನೇಟರ್ ನಿತೇಶ್ ಶೆಟ್ಟಿ ಎಕ್ಕಾರ್, ರಾಮ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹರಿಹರ ಶ್ರೀರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನದ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದಲ್ಲಿ ಶ್ರೀ ರಾಮ ಯುವಕ ವೃಂದದ ಸದಸ್ಯರ ಒಗ್ಗೂಡಿಕೆಯಿಂದ ಅಂಗನವಾಡಿ ಕೇಂದ್ರದ ಮುಖ್ಯ ಶಿಕ್ಷಕಿ ಹಾಗೂ ಊರಿನ ಜನರ ಸಹಕಾರದಿಂದ ಆರೋಗ್ಯ ಶಿಬಿರವು ಯಶಸ್ವಿಯಾಗಿ ನಡೆಯಿತು.