Monday, July 15, 2024
Homeರಾಜ್ಯಕಿನ್ನಿಗೋಳಿ: ಕೆಮ್ರಾಲ್ ಗ್ರಾ. ಪಂ. ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ

ಕಿನ್ನಿಗೋಳಿ: ಕೆಮ್ರಾಲ್ ಗ್ರಾ. ಪಂ. ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ಪರಿಸರದಲ್ಲಿ ಜೂ.7 ರಂದು ಸಂಜೆ 5:00 ಗಂಟೆಗೆ ರೇಷ್ಮಾ ಶೆಟ್ಟಿ, ಪಂಜ ಇವರ ಮನೆಯ ಮುಂಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣೆಯಾಗಿದೆ. ಇದರಿಂದ ಊರಿನ ಜನರು ಭಯ ಭೀತರಾಗಿದ್ದಾರೆ. ಇದರ ಹತ್ತಿರ ಅಂಗನವಾಡಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ, ಕೂಡಲೇ ಇದರ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಿಯ ಪಂಚಾಯತ್ ಸದಸ್ಯರಾದ ಸುರೇಶ್ ದೇವಾಡಿಗ , ನವೀನ್ ಸಾಲಿಯಾನ್ ಪಂಜ , ಕೇಶವ ಪೂಜಾರಿ ಪಂಜ , ಗ್ರಾಮಸ್ಥರಾದ ಸತೀಶ್ ಎಂ. ಶೆಟ್ಟಿ, ಸತೀಶ್ ಜೆ. ಶೆಟ್ಟಿ ಪಂಜದ ಗುತ್ತು ಮುಂತಾದವರು ಭೇಟಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular