‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಇರುತ್ತದೆ.ಬಾಲ್ಯದಲ್ಲಿಯೇ ಸದೃಢ ದೇಹವನ್ನು ಬೆಳೆಸಿಕೊಳ್ಳಲು ಕ್ರೀಡೆ ಅತ್ಯಂತ ಸಹಕಾರಿಯಾಗಿರುತ್ತದೆ. ಕ್ರೀಡೆಗಳಿಂದ ನಾಯಕತ್ವ ಗುಣ, ಧೈರ್ಯ, ಪ್ರಾಮಾಣಿಕತೆ, ಹೊಂದಾಣಿಕೆ, ಸಹಕಾರ, ದೈಹಿಕ ಶಕ್ತಿ, ಉತ್ತಮ ಆರೋಗ್ಯ ಪಡೆಯಬಹುದು ಎಂದು ಅನುಗ್ರಹ ಜುವೆಲರ್ಸ್ ನ ಮಾಲೀಕರಾದ ಪೃಥ್ವಿರಾಜ್ ಆಚಾರ್ಯ ಕಿನ್ನಿಗೋಳಿ ತಿಳಿಸಿದರು.
ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ವಾರ್ಷಿಕ ಕ್ರೀಡಾ ಕೂಟದ ಪಥ ಸಂಚಲನದ ಗೌರವ ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾ ಸೊಸೈಟಿ (ರಿ) ಶಿಮಂತೂರು ಇದರ ಕೋಶಾಧಿಕಾರಿ ಕೆ ಭುವನಾಭಿರಾಮ ಉಡುಪ, ಕ್ರೀಡಾ ಸಾಮರಸ್ಯವನ್ನು ಮೆರೆಯಬೇಕು, ಸ್ವಸ್ಥ ಮನಸ್ಸಿನಲ್ಲಿ ಆರೋಗ್ಯಯುತ ಯೋಚನೆಗಳಿದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಪ್ರಾಸ್ತವಿಕವಾಗಿ ಮಾತನಾಡಿದರು ಸಹ ಶಿಕ್ಷಕಿ ಸುಜಾತ ಸ್ವಾಗತಿಸಿದರು ದೈಹಿಕ ಶಿಕ್ಷಕ ಸೃಜನ್ ಪ್ರತಿಜ್ಞಾವಿಧಿ ಬೋಧಿಸಿದರು ಸಹ ಶಿಕ್ಷಕಿ ಅಮಿತಾ ವಂದಿಸಿದರು, ಅಶ್ವಿತ ನಿರೂಪಿಸಿದರು.