ಮುಲ್ಕಿ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಹೊಸ ಕಾವೇರಿ ಎಂಬಲ್ಲಿ ಆಟೋ ಗೆ ಲಾರಿ ಡಿಕ್ಕಿಯಾಗಿ ಆಟೋ ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ
ಗಾಯಗೊಂಡ ಆಟೋ ಚಾಲಕನನ್ನು ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ವಿಜಯ ಆಚಾರ್ಯ40), ಹಾಗೂ ಪ್ರಯಾಣಿಕರಾದ ಗೋಳಿಜೋರಾ ನಿವಾಸಿಗಳಾದ ದಿಕ್ಷೀತಾ(34),ಅಶ್ಮಿತಾ(34) ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿ ಮುಚ್ಚೂರು ಕಡೆಯಿಂದ ಕೆಂಪುಕಲ್ಲು ಹೇರಿಕೊಂಡು ಮುಲ್ಕಿ ಕಡೆಗೆ ಹೋಗುತ್ತಿದ್ದ ಲಾರಿ ಹೊಸಕಾವೇರಿ ಬಳಿ ಚಾಲಕನ ಅತಿ ವೇಗ ಹಾಗೂ ಆಜಾಗರೂಕತೆ ಚಾಲನೆಯಿಂದ ನಿಯಂತ್ರಣ ತಪ್ಪಿ ಏಕಾಏಕಿ ತೀರ ಬಲಬದಿ ಚಲಿಸಿ ವಿರುದ್ಧ ದಿಕ್ಕಿನಲ್ಲಿ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಆಟೋಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ಆಟೋದಲ್ಲಿ ಸಿಲುಕಿಕೊಂಡ ಚಾಲಕ ಸಮೇತ ಪ್ರಯಾಣಿಕರನ್ನು ಸ್ಥಳೀಯರು ಸಾಹಸ ಪಟ್ಟು ಹೊರತೆಗೆದು ಕಿನ್ನಿಗೋಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಪಘಾತದಿಂದ ಕೆಲ ಹೊತ್ತು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಿನ್ನಿಗೋಳಿ: ಆಟೋ ಗೆ ಲಾರಿ ಡಿಕ್ಕಿ ಆಟೋ ಚಾಲಕ ಸಹಿತ ಪ್ರಯಾಣಿಕರಿಗೆ ಗಾಯ
RELATED ARTICLES