ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಜ್ಪೆ ಯೋಜನಾ ಕಛೇರಿ , ಕಿಲ್ಪಾಡಿ ವಲಯದ ಅತ್ತೂರು ಕೆಮ್ರಾಲ್ ಕಾರ್ಯಕ್ಷೇತ್ರದ ಪಂಜದಗುತ್ತು ಶಾಂತರಾಮ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಇಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ರಾಗಿ ಲಕ್ಷ್ಮಿ ನಾರಾಯಣ (ವಲಯ ಅಧ್ಯಕ್ಷರು ಕಿಲ್ಪಾಡಿ ವಲಯ) ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಧನಂಜಯ ಶೆಟ್ಟಿಗಾರ್ (ತಾಲೂಕ್ ಜನಜಾಗೃತಿ ಸದಸ್ಯರು )ಉಪಸ್ಥಿತರಿದ್ದರು. ಶಾಲೆಯ ಮುಖ್ಯಪಾಧ್ಯಾಯರು ಎನ್. ಡಿ ಅಜ್ಜಯ್ಯ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತ್ತೂರು ಕೆಮ್ರಾಲ್ ಒಕ್ಕೂಟದ ಅಧ್ಯಕ್ಷರಾದ ವೀಣಾ ಉಪಸ್ಥಿತರಿದ್ದರು ವಲಯದ ಮೇಲ್ವಿಚಾರಕರಾದ ಲಲಿತಾರವರು ನಿರೂಪಣೆ ಮಾಡಿದರು. ಅತ್ತೂರು ಕೆಮ್ರಾಲ್ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವಿನಯಲತಾರವರು ಸ್ವಾಗತಿಸಿದರು. ಕಿಲ್ಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರಮೀಳಾ ಡಿ. ಸುವರ್ಣ ಯವರು ಧನ್ಯವಾದ ಅರ್ಪಿಸಿದರು
ಕಿನ್ನಿಗೋಳಿ : ಓಂ ಶ್ರೀ ಮಂಜುನಾಥ ನಮ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
RELATED ARTICLES