Saturday, September 14, 2024
Homeರಾಜ್ಯಕಿನ್ನಿಗೋಳಿ : ಜೂ.8,9 ಮತ್ತು 15 ರ ವರೆಗೆ ಶಿವಪ್ರಾಣಮ್ ನೃತ್ಯ ಸಂಸ್ಥೆ ದಶ ಸಂಭ್ರಮ...

ಕಿನ್ನಿಗೋಳಿ : ಜೂ.8,9 ಮತ್ತು 15 ರ ವರೆಗೆ ಶಿವಪ್ರಾಣಮ್ ನೃತ್ಯ ಸಂಸ್ಥೆ ದಶ ಸಂಭ್ರಮ ಕಾರ್ಯಕ್ರಮ

ಕಿನ್ನಿಗೋಳಿ: ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶ ಸಂಭ್ರಮದ ಕಾರ್ಯಕ್ರಮವು ಯುಗಪುರುಷ ಕಿನ್ನಿಗೋಳಿ ಇವರ ಸಹಕಾರದೊಂದಿಗೆ 3 ದಿನದ ಸರಣಿ ನೃತ್ಯ ಕಾರ್ಯಕ್ರಮವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜೂನ್ 8, 9 ಮತ್ತು 15 ರಂದು ನಡೆಯಲಿದೆ.

ಜೂನ್ 8 ರಂದು ಡಾ. ಹರಿಕೃಷ್ಣ ಪುನರೂರು ಉದ್ಘಾಟಸಿ ಮುಖ್ಯ ಅತಿಥಿಯಾಗಿ ಭುವನಾಭಿರಾಮ ಉಡುಪ ಹಾಗೂ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಪ್ರತೀಮಾ ಶ್ರೀಧರ ಇವರ ಗೌರವ ಉಪಸ್ಥಿತಿಯಲ್ಲಿ ಯುವ ಕಲಾವಿದರಾದ ವಿದುಷಿ ಪ್ರಕ್ಷಿಲಾ ಜೈನ್, ವಿದುಷಿ ಅಂಕಿತ ರೈ, ಅದಿತಿ ಲಕ್ಷ್ಮಿ, ಪೂರ್ವಿಕ ಹಾಗೂ ಗಾರ್ಗಿ ದೇವಿ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

ಜೂನ್ 9 ರಂದು ಅನ್ನಪೂರ್ಣ ರಿತೇಶ್ ಇವರ ನಿರ್ದೇಶನದಲ್ಲಿ ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲ್ಲಿದ್ದು ಈ ಕಾರ್ಯಕ್ರಮವನ್ನು ಭರತಾಂಜಲಿ ಸಂಸ್ಥೆಯ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಪ್ರತೀಮಾ ಶ್ರೀಧರ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಭುವನಾಭಿರಾಮ ಉಡುಪ, ದುಗ್ಗಣ್ಣ ಸಾವಂತರು, ಡಾ. ಅರುಣ್ ಉಳ್ಳಾಲ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಜೂನ್ 15 ರಂದು “ಶಾಂತಲಾ ನಾಟ್ಯ” ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಉಳ್ಳಾಲ ಮೋಹನ ಕುಮಾರ ಹಾಗೂ “ಕರ್ನಾಟಕ ಕಲಾಶ್ರೀ” ಗುರು ಕಮಲಾ ಭಟ್ ಇವರಿಂದ ದೀಪ ಪ್ರಜಲ್ವನೆಗೊಂಡು ಮುಖ್ಯ ಅತಿಥಿಗಳಾಗಿ ಭುವನಾಭಿರಾಮ ಉಡುಪ , ಮಾಧವ ಶೆಟ್ಟಿಗಾರ್ ಹಾಗೂ ಗುರು ಶ್ರೀಧರ್ ಹೊಳ್ಳ ಮತ್ತು ಗುರು ವಿದುಷಿ ಪ್ರತೀಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ ಪುಣ್ಯ ಡ್ಯಾನ್ಸ್ ಕಂಪೆನಿಯ ನಿರ್ದೇಶಕರದ‌ ಪಾರ್ಶ್ವನಾಥ ಉಪಾಧ್ಯಾಯ ಬೆಂಗಳೂರು ಮತ್ತು ಆದಿತ್ಯ ಜಿ. ಎಸ್, ಬೆಂಗಳೂರು , ಜಾನ್ಕಿ ಡಿ.ವಿ , ಶ್ರೇಯ.ಜಿ ಇವರು ನೃತ್ಯ ಕಾರ್ಯಕ್ರಮ ನೀಡಲ್ಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಲಾವಿದರನ್ನು ಪ್ರೊತ್ಸಾಯಿಸಬೇಕಾಗಿ ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿಯ ನಿರ್ದೇಶಕರಾದ ಅನ್ನಪೂರ್ಣ ರಿತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular