Wednesday, July 24, 2024
Homeಉಡುಪಿಕಿನ್ನಿಗೋಳಿ: ಶಿವಪ್ರಾಣಮ್ ನೃತ್ಯ ಸಂಸ್ಥೆ ದಶ ಸಂಭ್ರಮದ "ಶಿವಾಂಜಲಿ - 2024"

ಕಿನ್ನಿಗೋಳಿ: ಶಿವಪ್ರಾಣಮ್ ನೃತ್ಯ ಸಂಸ್ಥೆ ದಶ ಸಂಭ್ರಮದ “ಶಿವಾಂಜಲಿ – 2024”

ಕಿನ್ನಿಗೋಳಿ : ಗುರು ಪರಂಪರೆಗೆ ಸಾಕ್ಷಿಯಾದ ಶಿವಾಂಜಲಿ – 2024 ಶಿವಪ್ರಾಣಮ್ ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶ ಸಂಭ್ರಮದ “ಶಿವಾಂಜಲಿ – 2024” ಕಾರ್ಯಕ್ರಮವು ಯುಗಪುರುಷ ಕಿನ್ನಿಗೋಳಿ ಮತ್ತು ನೇಕಾರ ಸೌಧ ಕಿನ್ನಿಗೋಳಿ ಇವರ ಸಹಕಾರದೊಂದಿಗೆ ಕೊನೆಯ ದಿನದ ನೃತ್ಯ ಕಾರ್ಯಕ್ರಮವು ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ಇದೇ ಜೂನ್ 15 ರಂದು ನಡೆಯಿತು.
ನಾಲ್ಕು ತಲೆಮಾರಿನ ಗುರುಗಳು ಒಂದೇ ವೇದಿಕೆಯಲ್ಲಿದ್ದು ಗುರು ಪರಂಪರೆಗೆ ಸಾಕ್ಷಿಯಾಯಿತು. ಈ ಕಾರ್ಯಕ್ರಮವನ್ನು “ಶಾಂತಲಾ ನಾಟ್ಯ” ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಉಳ್ಳಾಲ ಮೋಹನ ಕುಮಾರ ಹಾಗೂ “ಕರ್ನಾಟಕ ಕಲಾಶ್ರೀ” ಗುರು ಶ್ರೀಮತಿ ಕಮಲಾ ಭಟ್ ಇವರಿಂದ ದೀಪ ಪ್ರಜಲ್ವನೆಗೊಂಡು ಮುಖ್ಯ ಅತಿಥಿಗಳಾಗಿ ಯುಗಪುರುಷದ ಶ್ರೀ ಭುವನಾಭಿರಾಮ ಉಡುಪ, ಶ್ರೀ ಮಾಧವ ಶೆಟ್ಟಿಗಾರ್ ಹಾಗೂ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಮಯದಲ್ಲಿ ಗುರುಗಳಿಗೆ ಗೌರರ್ವಾಪಣೆ ಶ್ರೀಮತಿ ಅನ್ನಪೂರ್ಣ ರಿತೇಶ್ ಮಾಡಿದರು.
ನಂತರ ಪುಣ್ಯ ಡ್ಯಾನ್ಸ್ ಕಂಪೆನಿಯ ನಿರ್ದೇಶಕರಾದ ಶ್ರೀ ಪಾರ್ಶ್ವನಾಥ ಉಪಾಧೈ ಮತ್ತು ಆದಿತ್ಯ ಜಿ. ಎಸ್.ಬೆಂಗಳೂರು, ಜಾನ್ಕಿ ಡಿ.ವಿ., ಶ್ರೇಯ .ಜಿ ಇವರು ನೃತ್ಯ ಕಾರ್ಯಕ್ರಮ ನೀಡಿದರು.
ಈ ಕಾರ್ಯಕ್ರಮವನ್ನು ಶ್ರೀಮತಿ ಆಶಾಕೀರ್ತಿ ಮತ್ತು ಹಿತಾ ಉಮೇಶ್ ನಿರೂಪಿಸಿದರು.

RELATED ARTICLES
- Advertisment -
Google search engine

Most Popular