ಕಿನ್ನಿಗೋಳಿ ರೇಷ್ಮಾ ಹಾಲ್ ನಲ್ಲಿ ನಡೆದ ಕಿನ್ನಿಗೋಳಿಯ ತಾರಿಪಾಡಿ ಗುತ್ತಿನ ಮನೆಯ ಸೊಸೆ ನಿಧಿ ಮೋಹನ್ ಪೂಂಜ ಇವರ ಸೀಮಂತ ವಿಶೇಷ ರೀತಿಯಲ್ಲಿ ನಡೆಯಿತು. ತಾಳಿಪಾಡಿ ಗುತ್ತು ದ ಪೂಂಜ ಕುಟುಮ ಮತ್ತು ಜೈ ತುಳುನಾಡ್ ( ರಿ) ಸಹಯೋಗದಲ್ಲಿ ಮರೆಯಾಗುತ್ತಿರುವ ತುಳುಬಾಷೆಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ತುಳು ಕವಿಗೋಷ್ಠಿ ನಡೆಯಿತು .
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಣಿಪಾಲ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಪ್ರಾಧ್ಯಾಪಕರು ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ವಹಿಸಿ ಮಾತಾನಾಡಿ ಮರೆಯಾಗಿತ್ತಿರುವ ಮಾತೃ ಬಾಷೆ ಉಳಿಸವುದು ಇಂತಹ ಕಾರ್ಯಕ್ರಮ ಗಳು ಅಲ್ಲಲ್ಲಿ ನಡೆದಲ್ಲಿ ನಮ್ಮ ಮಾತೃ ಬಾಷೆ ಮಾನ್ಯತೆ ಸಿಗುವುದಲ್ಲಿ ಬೇರೆ ಮಾತಿಲ್ಲ. ಈ ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿ ವಿಶೇಷ ವಾಗಿದೆ ಎಂದರು.
ವೇದಿಕೆಯಲ್ಲಿ ಜೈ ತುಳುನಾಡ್ (ರಿ) ಕೇಂದ್ರ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಜೈ ತುಲುನಾಡ್ (ರಿ) ಸ್ಥಾಪಕ ಸಮಿತಿ ಸದಸ್ಯ ಕಿರಣ್ ತುಲುವೆ ಉಪಸ್ಥಿತರಿದ್ದರು . ಕವಿಗೋಷ್ಠಿಯಲ್ಲಿ ಕವಿಗಳಾದ ನವೀನ ಕುಮಾರ್ ಪೆರಾರ , ವೈಷ್ಣವಿ ಸುಧೀಂದ್ರ ರಾವ್, ಶ್ವೇತಾ ಡಿ ಬಡಗಬೆಳ್ಳೂರು, ಪ್ರೇಮಾ ಆರ್ ಶೆಟ್ಟಿ ಮುಲ್ಕಿ ತನ್ನ ಕವಿತೆಗಳನ್ನು ವಾಚಿಸಿದರು . ಜೈ ತುಳುನಾಡ್ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜ ತಾರಿಪಾಡಿ ಗುತ್ತು ಸ್ವಾಗತಿಸಿದರು. ಚಿರಶ್ರೀ ಕಾರ್ಯಕ್ರಮ ನಿರೂಪಿಸಿದರು.