Monday, February 10, 2025
Homeಕಿನ್ನಿಗೋಳಿಕಿನ್ನಿಗೋಳಿ: ವಿಶ್ವಸಮ್ಮೇಳನ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಕಿನ್ನಿಗೋಳಿ: ವಿಶ್ವಸಮ್ಮೇಳನ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಕಿನ್ನಿಗೋಳಿ:ದ.ಕ.ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದ ಕಳಿಯ ಸಸಿಹಿತ್ಲು ಇದರ ಸುವರ್ಣಮಹೋತ್ಸವದ ಅಂಗವಾಗಿ ವಿಶ್ವಸಮ್ಮೇಳನ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸುವರ್ಣ ಸಿರಿ ಕಾರ್ಯಕ್ರಮದ ಅಂಗವಾಗಿ, ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಿಂದ ಅಗ್ಗಿದಕಳಿಯ ನಾರಾಯಣಗುರು ಸಂಘದ ವರೆಗೆ ಅದ್ದೂರಿಯ ಜನಪದ ಮೆರವಣಿಗೆ ನಡೆಯಿತು. ಉದ್ಯಮಿ ಧನಂಜಯ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭ ಶ್ರೀಕ್ಷೇತ್ರ ಬಳ್ಕೊಟ್ಟು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬೆಳಗಾವಿ ಶ್ರೀಕ್ಷೇತ್ರ ನಿಪ್ಪಾಣಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಮುಂಬೈ ಶ್ರೀಕ್ಷೇತ್ರ ಪೂವಾಯಿಯ ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ, ಮಹೇಶ್ ಶಾಂತಿ, ಮಾಜಿ ಸಚಿವ ಸುನೀಲ್ ಕುಮಾರ್, ರಾಜಶೇಖರ ಕೋಟ್ಯಾನ್, ಸಿ.ಬಿ ಕರ್ಕೇರ, ಪ್ರಕಾಶ್ ಬಿನ್, ಸತ್ಯಜಿತ್ ಸುರತ್ಕಲ್, ಎಲ್ ವಿ ಅಮೀನ್, ಧರ್ಮಪಾಲ ದೇವಾಡಿಗ, ಹರೀಶ್ ಅಂಕ್ಲೇಶ್ವರ, ಚಂದ್ರಶೇಖರ ಬೆಳ್ಚಡ. ರಮೇಶ್ ಚೇಳಾಯರು, ನರೇಶ್ ಸಸಿಹಿತ್ಲು, ಸರೋಜಿನಿ ಶಾಂತರಾಜ್, ಎಸ್.ಆರ್.ಪ್ರದೀಪ್, ಉದಯ ಬಿ. ಸುವರ್ಣ , ರಂಜಿತ್ ಪೂಜಾರಿ ತೋಡಾರು ಮತ್ತಿತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular