ಕಿನ್ನಿಮೂಲ್ಕಿ ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ ನೇತೃತ್ವದಲ್ಲಿ 23ನೇ ಮಾರ್ಚ್ ಮಹಿಳಾ ದಿನಾಚರಣೆ ನಡೆಯಿತು. ವಿವಿಧ ಆಟೋಟ ಸ್ಪರ್ಧೆ ನಡೆಸಿ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸುಮಾರು 35 ಮಹಿಳೆಯರು ಭಾಗವಹಿಸಿದ್ದರು . ಉಷಾ ಚಡಗ , ವಿಜಯಲಕ್ಷ್ಮಿ ಕಿರಣ್ , ಬೃಂದಾ ರಾಜೇಂದ್ರ , ಉಮಾ ಸುರೇಶ್ , ಸುಧಾ ಶ್ರೀಕಾಂತ್ , ಕಾರ್ಯದರ್ಶಿ ಮಂಚಿ ಸುರೇಶ್ ರಾವ್ , ಕೋಶಾಧಿಕಾರಿ ಶ್ರೀಕಾಂತ್ ಭಟ್ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.