Friday, March 21, 2025
Homeಆರೋಗ್ಯಕೊಡವೂರು: ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ

ಕೊಡವೂರು: ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ

ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು, ಲಯನ್ಸ್ & ಲಿಯೋ ಕ್ಲಬ್, ಪರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಪೆ, ಸಮುದಾಯ ವೈದ್ಯಕೀಯ ವಿಭಾಗ, ನರರೋಗ ವಿಭಾಗ, ಅಕ್ಯುಪೇಶನಲ್ ಥೆರಪಿ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಆರೋಗ್ಯ ಮಾಹಿತಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕೆ.ಎಂ.ಸಿ. ಮಣಿಪಾಲದ ನರರೋಗ ತಜ್ಞರಾದ ಡಾ. ಅರವಿಂದ ಎನ್. ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಅಕ್ಯುಪೇಶನಲ್ ಥೆರಪಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸೆಬಸ್ಟಿನ್ ಅನಿತಾ ಡಿಸೋಜಾ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದಿವ್ಯಾ ಪ್ರಭು, ಪರ್ಕಳ ಲಯನ್ಸ್ & ಲಿಯೋ ಕ್ಲಬ್ ನ ರಾಧಾಕೃಷ್ಣ ಮೆಂಡನ್, ದಿವ್ಯಾಂಗ ರಕ್ಷಣಾ ಸಮಿತಿ ಕಾರ್ಯದರ್ಶಿ ಜಯ ಪೂಜಾರಿ ಕಲ್ಮಾಡಿ, ದಿವ್ಯಾಂಗ ರಕ್ಷಣಾ ಸಮಿತಿಯ ಮ್ಯಾನೇಜರ್ ಅಖಿಲೇಶ್ ಎ ಉಪಸ್ಥಿತರಿದ್ದರು. ತರುವಾಯ ಸ್ಟ್ರೋಕ್ ಸಮಸ್ಯೆಯ ಬಗ್ಗೆ ಡಾ. ಅರವಿಂದ ಎನ್. ಪ್ರಭು ಹಾಗೂ ಡಾ. ಸೆಬಸ್ಟಿನ್ ಅನಿತಾ ಡಿಸೋಜಾ ಅವರು ಮಾಹಿತಿ ನೀಡಿದರು. ಅಕ್ಯುಪೇಶನಲ್ ಥೆರಪಿ ವಿಭಾಗದ ವಿದ್ಯಾರ್ಥಿಗಳಿಂದ ಸ್ಟ್ರೋಕ್ ನ ಕುರಿತು ಕಿರು ಪ್ರಹಸನ ನಡೆಯಿತು. ನಂತರ ಶಿಬಿರಕ್ಕೆ ಬಂದವರಿಗೆ ನರ ಸಂಬಂಧಿತ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ. ದಲರಾಜ್, ಡಾ. ಜೆಲಿಟಾ, ಸಾಮಾಜಿಕ ಕಾರ್ಯಕರ್ತ ಮಹೇಶ್, ಅಕ್ಯುಪೇಶನ್ ವಿಭಾಗದ ಸದಿಚಾ ಕಾಮತ್, ಸಿ.ಹೆಚ್.ಓ. ಮೈತ್ರಿ, ಶುಶ್ರೂಷಕಿಯರಾದ ಸುರೇಖಾ & ಲವಿನಾ, ಸಿಬ್ಬಂದಿ ಸೃಜನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular