Sunday, March 23, 2025
Homeರಾಜ್ಯರಾಜ್ಯ, ಕೇಂದ್ರ ಸರ್ಕಾರದ ಬಗ್ಗೆ ಕೋಡಿಮಠದ ಶ್ರೀಗಳ ಭವಿಷ್ಯವಾಣಿ ನಿಜವಾಗುತ್ತಾ? | ಶ್ರೀಗಳು ನುಡಿದ ಭವಿಷ್ಯವೇನು?

ರಾಜ್ಯ, ಕೇಂದ್ರ ಸರ್ಕಾರದ ಬಗ್ಗೆ ಕೋಡಿಮಠದ ಶ್ರೀಗಳ ಭವಿಷ್ಯವಾಣಿ ನಿಜವಾಗುತ್ತಾ? | ಶ್ರೀಗಳು ನುಡಿದ ಭವಿಷ್ಯವೇನು?

ಹಾಸನ: ಈಗಿನ ಕಾಲದಲ್ಲಿ ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ. ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಆಗೋದು ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಮಾತನಾಡಿದ ಅವರು, ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕತ್ತರಿಸಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್‌ನಲ್ಲೂ, ಸ್ಟೇಟ್‌ನಲ್ಲೂ ಆಗೋದು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಎಂದು ಹಿಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ. ಪ್ರಕೃತಿ ವಿಕೋಪ ಕುರಿತು ಮಾತನಾಡಿ, ಮಳೆ ಇನ್ನೂ ಮುಂದುವರೆಯಲಿದೆ. ಜಾಸ್ತಿ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಾಕೃತಿಕ ದೋಷವಿದ್ದು ಭೂಮಿ, ಅಗ್ನಿ, ವಾಯು, ಆಕಾಶದಿಂದ ಎಲ್ಲಾ ಕಡೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ ಕುಸಿದು ಹೋಗುತ್ತದೆ. ಪ್ರವಾಹದಲ್ಲಿ ಜಗತ್ತು ಮುಳುಗುತ್ತದೆ ಎಂದು ಹಿಂದೊಮ್ಮೆ ನಾನು ಹೇಳಿದ್ದೇನೆ. ಇನ್ನೂ ಮಳೆಯಾಗಲಿದೆ. ಅದರಿಂದ ಅನಾಹುತ ಸಂಭವಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular