ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ಟ್ರಸ್ಟ್ (ರಿ.) ಕೊಳಕೆ, ಇರ್ವತ್ತೂರು ದಿನಾಂಕ 07.04.2025ನೇ ಸೋಮವಾರದಿಂದ ದಿನಾಂಕ 09.04.2025ನೇ ಬುಧವಾರದವರೆಗೆ ಒದಗುವ ಶುಭ ಲಗ್ನ ಸುಮುಹೂರ್ತದಲ್ಲಿ ವಾರ್ಷಿಕ ನೇಮೋತ್ಸವ ಜರಗಲಿರುವುದು.
ದಿನಾಂಕ 07-04-2025ನೇ ಸೋಮವಾರ ಬೆಳಿಗ್ಗೆ ಗಂಟೆ 10.00ಕ್ಕೆ ಗಣಹೋಮ ಹಾಗೂ ದೈವಗಳ ಶುದ್ದೀಕರಣ, ಸಾಯಂ. ಗಂಟೆ 6.00ಕ್ಕೆ ದೈವಗಳ ಭಂಡಾರ ದೈವಸ್ಥಾನಕ್ಕೆ ಆಗಮನ, ರಾತ್ರಿ ಗಂಟೆ 8.00ಕ್ಕೆ ಧರ್ಮರಸು ಪಂಜುರ್ಲಿ ದೈವದ ನೇಮೋತ್ಸವ , ರಾತ್ರಿ ಗಂಟೆ 11.00ಕ್ಕೆ ಮಹಾಕಾಳಿ ದೈವದ ನೇಮೋತ್ಸವ ನಡೆಯಲಿದೆ.
ದಿನಾಂಕ 08-04-2025ನೇ ಮಂಗಳವಾರ ಸಾಯಂ.ಗಂಟೆ 6.00ರಿಂದ 8.00ರವರೆಗೆ ಶ್ರೀ ವೇಣುಗೋಪಾಲಕೃಷ್ಣ ಭಜನಾ ಮಂಡಳಿ ಕೊಳಕೆ ಇರ್ವತ್ತೂರು ಇವರಿಂದ “ಭಜನಾ ಕಾರ್ಯಕ್ರಮ”. ರಾತ್ರಿ ಗಂಟೆ 8.00ಕ್ಕೆ ಬ್ರಹ್ಮ ಮುಗೇರ ದೈವಗಳ ನೇಮೋತ್ಸವ ರಾತ್ರಿ ಗಂಟೆ 11.00ಕ್ಕೆ ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿದೆ.
ದಿನಾಂಕ 09.04.2025ನೇ ಬುಧವಾರ ಬೆಳಿಗ್ಗೆ ಗಂಟೆ 8.00ಕ್ಕೆ ಕೊರಗಜ್ಜ ದೈವದ ನೇಮೋತ್ಸವ, ಬೆಳಿಗ್ಗೆ ಗಂಟೆ 11.00ಕ್ಕೆ ಹಲೇರ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.