ಕೊಲಾರ: ಸ್ವರ್ಣಭೂಮಿ ಫೌಂಡೆಶನ್, ಕೋಲಾರ, ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕನ್ನಡ ಭವನ ಪ್ರಕಾಶನ, ರೋಟರಿ ಕ್ಲಬ್, ಸಂಯುಕ್ತಾಶ್ರಯದಲ್ಲಿ ಕಾಸರಗೋಡು-ಕೋಲಾರ ಕನ್ನಡ ಉತ್ಸವ ಹಾಗೂ ರಾಷ್ಟ್ರಕವಿ ಅವರ ಜನ್ಮದಿನದ ಪ್ರಯಕ್ತ ಜ. 4ರಂದು ಕನ್ನಡ ಪಯಸ್ವಿನಿ ಪ್ರಶಸ್ತಿ -2024 ಮತ್ತು ಕುವೆಂಪು ವಿಶ್ವ ಮಾನವ ಕನ್ನಡರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲಿನ ಪತ್ರಕರ್ತರ ಭವನ ಅಂತರಗಂಗೆ ಮುಖ್ಯರಸ್ತೆ ಕೋಲಾರದಲ್ಲಿ ಜರುಗಲಿದೆ.
ಅಲ್ಲದೆ, ಅಂದು ವಿಶೇಷ ಉನ್ಯಾಸ, ಪುಸ್ತಕ ಲೋಕಾರ್ಪಣೆ, ಗೀತಾ ಗಾಯನ ಹಾಗೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.