Thursday, April 24, 2025
Homeಬೆಳ್ತಂಗಡಿಕೊಲ್ಪಾಡಿ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕೊಲ್ಪಾಡಿ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಬೆಳಾಲು : ಜುಲೈ 14 ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬೆಳ್ತಂಗಡಿ ತಾಲೂಕು. ಬೆಳಾಲು ಕೊಲ್ಪಾಡಿ ಓಂ ಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ರವರು ನೆರವೆರಿಸಿ ಆಷಾಡ ಮಾಸದಲ್ಲಿ ಸೇವಿಸುವ ಆಹಾರಗಳ ಬಗ್ಗೆ ವೈಜ್ಞಾನಿಕವಾಗಿ ಪ್ರಾಮುಖ್ಯತೆ ಏನು ಎಂಬುವುದರ ಬಗ್ಗೆ ತಿಳಿಸಿದರು. ಸದೃಢ ಆರೋಗ್ಯ ನಿರ್ವಹಣೆಗೆ ಪೌಷ್ಠಿಕ ಆಹಾರ ತುಂಬಾ ಅವಶ್ಯಕವಾಗಿದ್ದು ಹಲವಾರು ರೋಗ ರುಜಿನ ಗಳನ್ನು ತಡೆಗಟ್ಟಲು ಸಹಕಾರಿ ರಿಯಾಗಿದೆ ಎಂದು ತಿಳಿಸಿದರು ಸಂಪನ್ಮೂಲ ವ್ಯಕ್ತಿಯಾದ ಉಷಾ ಸಮತೋಲನ ಆಹಾರದ ಬಗ್ಗೆ ದೀರ್ಘಕಾಲ ಕಾಡುವ ಕಾಯಿಲೆಗಳನ್ನು ತಡೆಗಟ್ಟಲು ಆಗಾದವಾದ ಪೌಷ್ಠಿಕಾಂಶಗಳನ್ನು ಒಳಗೊಂಡ ರೋಗನಿರೋದಕ ಶಕ್ತಿಯಿರುವ ಪ್ರೊಟೀನ್ ಅಂಶವುಳ್ಳ ಆಹಾರಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ನೀಲಾವತಿ ಸೇವಾ ಪ್ರತಿನಿಧಿ ಪ್ರಮೀಳಾರ ವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯರಾದ ಮಂಜುಳಾ ರವರು ವಹಿಸಿದರು. ಕೇಂದ್ರದ ಸದಸ್ಯರಾದ ಗುಲಾಬಿಯವರು ಸ್ವಾಗತಿಸಿ ಲಲಿತಾ ಧನ್ಯವಾದ ನೀಡಿದರು. ಸಮನ್ವಯಧಿಕಾರಿ ಮಧುರರವರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular