ಬೆಂಗಳೂರು: ಟ್ವಿಟರ್‌ಗೆ ಪರ್ಯಾಯವಾಗಿ ಆರಂಭಗೊಂಡಿದ್ದ ದೇಶೀ ಸಾಮಾಜಿಕ ಜಾಲತಾಣ ವೇದಿಕೆ ಕೂ (koo) ಈಗ ಬಾಗಿಲು ಹಾಕಿದೆ. ದೇಶೀಯ ಸಾಮಾಜಿಕ ಜಾಲತಾಣ ವೇದಿಕೆ ಕೂ ಈಗ ತನ್ನ ಕಾರ್ಯಾಚರಣೆ ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಹೆಚ್ಚಿನ ತಂತ್ರಜ್ಞಾನದ ವೆಚ್ಚ ಹಾಗೂ ಸ್ವಾಧೀನ ಮಾತುಕತೆ ವಿಫಲವಾದ ಕಾರಣ ಕೂ ವೇದಿಕೆಯನ್ನ ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೂ ಉತ್ತುಂಗದಲ್ಲಿದ್ದಾಗ ಸುಮಾರು 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಸುಮಾರು 9 ಸಾವಿರ ವಿಐಪಿಗಳನ್ನು ಇದನ್ನು ಬಳಸುತ್ತಿದ್ದರು. 1 ಕೋಟಿ ಮಾಸಿಕ ಬಳಕೆದಾರರೂ ಇದ್ದರು. ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದ್ದರೂ ಕೂ ಬಳಕೆದಾರರನ್ನು ತಲುಪಲು ವಿಫಲವಾಗಿದೆ.
ಇಲ್ಲಿವರೆಗೆ ಸಹಕಾರ ನೀಡಿದ ಬೆಂಬಲಿಗರು, ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸಂಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಸಂಸ್ಥಾಪಕರು ತಿಳಿಸಿದ್ದಾರೆ.