ಮುಂಡ್ಕೂರು : ಭಕ್ತರನ್ನು ಆಕರ್ಷಿಸುತ್ತಿರುವ ಬಹು ಕಾರಣಿಕದ ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಮತ್ತು ಕೊರಗರ ಪಂಜುರ್ಲಿ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವವು ಎ. 20 ರ ಶನಿವಾದಂದು ಕ್ಷೇತ್ರದ ದಿವಾಕರ ಪೂಜಾರಿ ಮುಂದಾಳತ್ವ ದಲ್ಲಿ ವಿಜೃಂಭಣೆಯಿಂದ ಜರಗಲಿದೆ.
ಎ. 19 ರ ಶುಕ್ರವಾರದಂದು ಶ್ರೀ ಕೊರಗಜ್ಜ ಮತ್ತು ಕೊರಗರ ಪಂಜುರ್ಲಿ ಕ್ಷೇತ್ರದಲ್ಲಿ ಬೆಳಿಗ್ಗೆ 6:00 ಕ್ಕೆ ನವಕ ಪ್ರಧಾನ ಹೋಮ, ಗಣಹೋಮ ಎ. 20 ರ ಶನಿವಾರದಂದು ಬೆಳಿಗ್ಗೆ 9:00 ಕ್ಕೆ ಭಂಡಾರ ಇಳಿಯುವುದು, ಮಧ್ಯಾಹ್ನ 12:30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ತದನಂತರ ಮಧ್ಯಾಹ್ನ 2:30 ರಿಂದ ಸತ್ಯದೇವತೆ ನೇಮ, ಸಂಜೆ 4:30 ಕ್ಕೆ ಪಿಲಿಚಾಮುಂಡಿ ನೇಮ, ಸಾಯಂಕಾಲ 6:30 ಕ್ಕೆ ಶ್ರೀ ಮಂತ್ರದೇವತೆ, ವರ್ತೆ ಪಂಜುರ್ಲಿ ನೇಮ, ರಾತ್ರಿ 8:30 ಕ್ಕೆ ಕೊರಗರ ಪಂಜುರ್ಲಿ ನೇಮ, ರಾತ್ರಿ 11:00 ಕ್ಕೆ ಕೊರತಿ ದೈವದ ನೇಮ, ರಾತ್ರಿ 2:00 ಗಂಟೆಗೆ ಕೊರಗಜ್ಜ ನೇಮ ಜರಗಲಿದೆ. ಊರ-ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ದಿವಾಕರ ಪೂಜಾರಿ ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗೆ ಧೀರಜ್ ಪೂಜಾರಿ(97402 82430)ಯವರನ್ನು ಸಂಪರ್ಕಿಸಬಹುದಾಗಿದೆ.