ಕಟಪಾಡಿ : ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿಲಾಮಯ ಕೋಟೆ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ಅನಾದಿಕಾಲದಿಂದಲೂ ಗ್ರಾಮ ದೈವವಾಗಿ ನೆಲೆಗೊಂಡ ಶ್ರೀ ಬೊಬ್ಬರ್ಯ ಸಹಿತ ಪರಿವಾರ ದೈವಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಎ.15ರಂದು ಜರಗಲಿದೆ.
ಹೊರೆಕಾಣಿಕೆ ಮೆರವಣಿಗೆ : ಎ. 14ರಂದು ಮಧ್ಯಾಹ್ನ 3ಕ್ಕೆ ಕಟಪಾಡಿ ಪೇಟೆ ಬೊಬ್ಬರ್ಯ ಗಡುವಿನಿಂದ ಹೊರೆಕಾಣಿಕೆ ಮೆರವಣಿಗೆ ಸಾಗಿಬರಲಿದೆ. ವೇ|ಮೂ| ಅಂಬಾಡಿ ಪ್ರವೀಣ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ” ಕಾರ್ಯಕ್ರಮಗಳು ಜರಗಲಿದ್ದು ಸಂಜೆ ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ಸಪ್ತ ಶುದ್ಧಿ ವಾಸ್ತುಪೂಜೆ, ವಾಸ್ತುಹೋಮ, ಬಲಿ ಜರಗಲಿದೆ.
ಎ. 15ರಂದು ಪ್ರಾತಃಕಾಲ ಪ್ರತಿಷ್ಠಾ ವಿಧಿ, ಬೆಳಗ್ಗೆ 9ಕ್ಕೆ ವೃಷಭ ಲಗ್ನದಲ್ಲಿ ಶ್ರೀ ಬೊಬ್ಬರ್ಯ ಸಹಿತ ಪರಿವಾರ ದೈವಗಳ ಪುನಃ ಪ್ರತಿಷ್ಠೆ, 48 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, 10ಕ್ಕೆ ದರ್ಶನ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 4ಕ್ಕೆ ಧಾರ್ಮಿಕ ಸಭೆಯು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಕೋಟೆ ಅಧ್ಯಕ್ಷತೆಯಲ್ಲಿ ಜರಗಲಿದೆ. ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷ ಶುಭೋದಯ ಶೆಟ್ಟಿ ಕೋಟೆಬೀಡು ದೀಪ ಬೆಳಗುವರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಉಪನ್ಯಾಸ ನೀಡಲಿದ್ದಾರೆ. ವಿಶೇಷ ಸಮ್ಮಾನ, ಸ್ಥಳ ದಾನಿಗಳು, ಸ್ಥಳ ವಂದಿಗರು, ಚಾಕರಿ ವರ್ಗಕ್ಕೆ ಗೌರವಾರ್ಪಣೆ, ಮಹಾದಾನಿಗಳಿಗೆ ವಿಶೇಷ ಕೃತಜ್ಞತಾರ್ಪಣೆ ನಡೆಯಲಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳ್ಳಾ ಅವರಿಂದ ತುಳುನಾಡ ಸಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.
ಎ.17ರ ರಾಮನವಮಿಯಂದು ಶ್ರೀ ಬೊಬ್ಬರ್ಯ ಸಹಿತ ಪರಿವಾರ ದೈವಗಳ ಕಾಲಾವಧಿ ನೇಮ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಕೋಟೆ ಬೀಡುವಿನಿಂದ ಭಂಡಾರ ಆಗಮಿಸಿ, ಬಳಿಕ ನಂದಿಗೋಣ, ಬೊಬ್ಬರ್ಯ-ನೀಚ ನೇಮ, ಬೊಬ್ಬರ್ಯ ದರ್ಶನ, ರಾತ್ರಿ ಗಂಟೆ 38 ಬೊಬ್ಬರ್ಯ ಸವಾರಿ ಕಟಪಾಡಿ ಬೊಬ್ಬರ್ಯ ಗಡುತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ನಾಥ ಕೋಟೆ, ಗೌರವಾಧ್ಯಕ್ಷ ಶುಭೋದಯ ಶೆಟ್ಟಿಕೋಟೆ ಬೀಡು, ಪ್ರಧಾನ ಕಾರ್ಯದರ್ಶಿ ಅರುಣ್ ಚಂದ್ರ ಕೋಟ್ಯಾನ್, ಪ್ರಧಾನ ಕೋಶಾಧಿಕಾರಿ ಪ್ರಸನ್ನ ಪೂಜಾರಿ, ಮುಕ್ಕಾಲಿ ಹರಿಶ್ಚಂದ್ರ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.