ಕುಂದಾಪುರ: ಖಾಸಗಿ ಶಾಲಾ ಬಸ್‌ಗೆ ಗಾಳಿ ತುಂಬುವಾಗ ಟಯರ್ ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಪಿಎಸ್‌ಪಿ ಪಿಯು ಕಾಲೇಜು ಬಳಿ ನಡೆದಿದೆ.
ಅಬ್ದುಲ್ ರಜೀದ್ ಗಂಭೀರವಾಗಿ ಗಾಯಗೊಂಡಿರುವ ಯುವಕ. ಇವರು ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಟಯರ್ ಪಂಚರ್ ಶಾಪ್‌ನಲ್ಲಿ ಶಾಲಾ ಬಸ್‌ನ ಟಯರ್‌ಗೆ ಗಾಲಿ ತುಂಬುತ್ತಿರುವ ವೇಳೆ ಸ್ಫೋಟಗೊಂಡಿದೆ. ಈ ವೇಳೆ ರಜೀದ್ ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.