ಕೊಯ್ಯೂರು : ಮಾ 01 ಶ್ರೀ ಕೃಷ್ಣ ಭಜನಾ ಮಂಡಳಿ (ರಿ.) ಆದೂರು ಪೆರಾಲ್, ಕೊಯ್ಯೂರು, ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ತಂಡ ಆದೂರು ಪೇರಾಲ್, ಕೊಯ್ಯೂರು ಇವುಗಳ ಜಂಟಿ ಆಶ್ರಯದಲ್ಲಿ ನಗರ ಭಜನಾ ಮoಗಳೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಾ 01 ಶನಿವಾರ ನಡೆಯಿತು. ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೇರವೇರಿತು ಭಜನಾ ಮ್ಯಾಂಗಲೋತ್ಸವದಲ್ಲಿ ವಿವಿಧ ಭಜನಾ ಮಂಡಳಿ ತಂಡಗಳು ಭಾಗವಹಿಸಿದರು . ಈ ಸಂದರ್ಭದಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಪಿ. ಚಂದ್ರಶೇಖರ ಸಾಲಿಯಾನ್, ಆದೂರ್ ಪೇರಾಲ್ ಶ್ರೀ ಕೃಷ್ಣಾ ಭಜನಾ ಭಜನಾ ಮಂಡಳಿ ಅಧ್ಯಕ್ಷರಾದ ರೋಹಿತಾಶ್ವ ಉಮಿಯ ದರ್ಖಾಸ್, ಕಾರ್ಯದರ್ಶಿ ಓಬಯ್ಯಾ ನಾಯ್ಕ,ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಾದಿಗಳು ಊರವರು ಉಪಸ್ಥಿತರಿದ್ದರು.