Sunday, July 14, 2024
Homeಮೂಡುಬಿದಿರೆಕೃಷ್ಣೋತ್ಸವ-2024ರ ಮೊದಲ ಆಹ್ವಾನಪತ್ರ ಗೋಪಾಲಕೃಷ್ಣ ದೇವಸ್ಥಾನ, ಹನುಮಂತ ದೇವಸ್ಥಾನಕ್ಕೆ ಅರ್ಪಣೆ

ಕೃಷ್ಣೋತ್ಸವ-2024ರ ಮೊದಲ ಆಹ್ವಾನಪತ್ರ ಗೋಪಾಲಕೃಷ್ಣ ದೇವಸ್ಥಾನ, ಹನುಮಂತ ದೇವಸ್ಥಾನಕ್ಕೆ ಅರ್ಪಣೆ

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ಕೃಷ್ಣೋತ್ಸವ-2024 ಕಾರ್ಯಕ್ರಮದ ಪ್ರಯುಕ್ತ ಮೊದಲ ಆಹ್ವಾನಪತ್ರ ಜೊತೆಗೆ ಫಲಪುಷ್ಪ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಸಮರ್ಪಿಸಲಾಯಿತು. ಶ್ರೀ ಗೋಪಾಲಕೃಷ್ಣ ದೇಗುಲದ ಆಡಳಿತ ಮುಖ್ಯಸ್ಥರು ಗುರುಪ್ರಸಾದ್ ಹೊಳ್ಳ, ಶ್ರೀ ಗೋಪಾಲಕೃಷ್ಣ ದೇವಳದ ಅರ್ಚಕರಾದ ರಾಘವೇಂದ್ರ ಭಟ್, ಶ್ರೀ ಹನುಮಂತ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಭಟ್, ಸಂಘಟನೆಯ ಅಧ್ಯಕ್ಷರಾದ ಅಮರ್ ಕೋಟೆ, ಸಂಚಾಲಕ ನಾರಾಯಣ ಪದುಮಲೆ, ಟ್ರಸ್ಟಿ ರಂಜಿತ್ ಶೆಟ್ಟಿ, ಕೋಶಾಧಿಕಾರಿ ಗಣೇಶ್ ಪೈ, ಸೇವಾ ಪ್ರಮುಖ್ ಸಂಪತ್ ಪೂಜಾರಿ, ರಕ್ತ ನಿಧಿ ಪ್ರಮುಖ್ ಮನು, ಪ್ರಮುಖರುಗಳಾದ ಶ್ರೀಮತಿ ಸುಕನ್ಯಾ, ವಿಶ್ವಾಸ್ ಈ ವೇಳೆ ಉಪಸ್ಥಿತರಿದ್ದರು.‌

RELATED ARTICLES
- Advertisment -
Google search engine

Most Popular