ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಭಾ. ಕೃ. ಅ. ಪ.-ಕೃಷಿ ವಿಜ್ಞಾನ ಕೇಂದ್ರ ದ, ಕ, ಮಂಗಳೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ, ಸಿ, ಟ್ರಸ್ಟ್ (ರಿ) ಮಂಗಳೂರು ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಪದ್ಧತಿಗಳ ಕೌಶಲ್ಯ ಅಭಿವೃದ್ಧಿ ಕುರಿತ ಐದು ದಿನಗಳ ತರಬೇತಿ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. 25 ಪ್ರಗತಿಪರ ಕೃಷಿಕರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮಗಳು, ಮಲ್ಲಿಗೆ ಕೃಷಿ ಮತ್ತು ಹಣ್ಣಿನಲ್ಲಿ ಮೌಲ್ಯವರ್ಧನೆ, ವೈಜ್ಞಾನಿಕ ಪಶುಪಾಲನೆ ಪದ್ದತಿಗಳು, ಪೋಷಕಾಂಶಗಳ ನಿರ್ವಹಣೆ, ಹಾಗೂ ಎರೆಹುಳು ಉತ್ಪದನೆ ಮತ್ತು ತಾಂತ್ರಿಕತೆ, ಕೀಟ ಮತ್ತು ರೋಗಗಳ ನಿರ್ವಹಣೆ, ಕೃಷಿ ಸಂಯೋಜಿತಾ ಮೀನುಗಾರಿಕೆ, ಹಾಗೂ ಅಣಬೆ ಬೇಸಾಯದ ಕುರಿತು ನುರಿತ ಸಂಬಂಧಪಟ್ಟ ವಿಜ್ಞಾನಿಗಳು ತರಭೇತಿಯನ್ನು. ಪ್ರಾತ್ಯಕ್ಷತೆ ಮೂಲಕ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶ್ ವಹಿಸಿದ್ದರು. ಎಲ್ಲ ವಿಜ್ಞಾನಿಗಳ ಉಪಸ್ಥಿತಿಯಲ್ಲಿ ತರಬೇತಿಯಲ್ಲಿ ಭಾಗವಹಿಸಿದ ಪ್ರಗತಿಪರ ಕೃಷಿಕರಿಗೆ ಮಾವಿನ ಗಿಡಗಳ ವಿತರಣೆ ಮಾಡಲಾಯಿತು. ಶ್ರೀ ಕ್ಷೇ ಧ ಗ್ರಾ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಮಂಗಳೂರು ತಾಲೂಕು ಇದರ ಕೃಷಿ ಮೇಲ್ವಿಚಾರಕ ಮೋಹನ್ ಕಾರ್ಯಕ್ರಮ ಸಂಯೋಜಿಸಿದರು.