ಹೆಬ್ರಿ: ಹೆಬ್ರಿಯ ಕುಚ್ಚೂರು ಶ್ರೀ ಕೊಡಮಣಿತ್ತಾಯ, ಧೂಮವತೀ ಮತ್ತು ಪರಿವಾರ ದೈವಗಳ ಗರಡಿಯ ಬ್ರಹ್ಮಕಲಶ ಮತ್ತು ವಾರ್ಷಿಕ ನೇಮೋತ್ಸವ ಏ.15ರಂದು ಸೌರಮಾನ ಯುಗಾದಿಯ ಪಾಡ್ಯದಂದು ನಡೆಯಲಿದೆ. ಏ. 14ರಂದು ತೋರಣ ಮುಹೂರ್ತ, ವಾಸ್ತುಪೂಜೆ, ವಾಸ್ತುಹೋಮ, ಪ್ರಾಕಾರ ಬಲಿ. ಏ.15ರಂದು ಗಣಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಗಳು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಗರಡಿ ಗೌರವಾಧ್ಯಕ್ಷ ಕೆ. ಬಾಲಕೃಷ್ಣ ರಾವ್ ಬಾರಕೂರು, ಅಧ್ಯಕ್ಷ ಕಿರಣ್ ತೋಳಾರ್, ನೀರೆ ಕೃಷ್ಣಶೆಟ್ಟಿ ನಿತ್ಯಾನಂದ ಭಟ್, ಸತೀಶ್ ಶೆಟ್ಟಿ ಉಪಸ್ಥಿತರಿರುವರು. ಸಂಜೆ 6.30ರಿಂದ ದೈವಗಳ ದರ್ಶನ, ಕೋಲ ನಡೆಯಲಿದೆ.