ಮುಲ್ಕಿ: ಸೀಮೆಯ ಅರಸು ಕಂಬಳ ಡಿಸೆಂಬರ್ 22ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಕುದಿ ಕಂಬಳ ನಡೆಯಿತು.
ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ಉಪಸ್ಥಿತಿಯಲ್ಲಿ ಅರಸು ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು ರವರು ಮುಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಕೋಣಗಳನ್ನು ಕರೆಗೆ ಇಳಿಸಲಾಯಿತು.
ಈ ಸಂದರ್ಭ ವಕೀಲರಾದ ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಪದಾಧಿಕಾರಿಗಳಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನ್ ಕೋಟ್ಯಾನ್ ಶಿಮಂತೂರು,
,ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಮಹೀಮ್ ಹೆಗ್ಡೆ,ರಾಜೇಂದ್ರ ಜೈನ್,ಷಣ್ಮುಖ, ಸತೀಶ್ ಶೆಟ್ಟಿ, ಗೌತಮ್ ಜೈನ್ ಮುಲ್ಕಿ ಅರಮನೆ ಚಂದ್ರಹಾಸ್ ಪಡುತೋಟ, ಮತ್ತಿತರರು ಉಪಸ್ಥಿತರಿದ್ದರು.