ಉಳ್ಳಾಲ ತಾಲೂಕಿನ ನರಿಂಗಾನ ಕಂಬಳ ಸಮಿತಿಯ ಆಶ್ರಯದಲ್ಲಿ ನಡೆಯಲಿರುವಂತಹ ಮೂರನೇ ವರ್ಷದ ನರಿಂಗಾನ ಕಂಬಳೋತ್ಸವಕ್ಕೆ ಪೂರ್ವಭಾವಿಯಾಗಿ “ಕುದಿ ಕಂಬಳ”ಕ್ಕೆ ಜುಲೈ 7ರಂದು ಭಾನುವಾರ ಬೆಳಗ್ಗೆ 9:30 ಮುಹೂರ್ತ ನಡೆಯಲಿದೆ ಎಂದು ಕಂಬಳ ಸಮಿತಿ ತಿಳಿಸಿದ್ದಾರೆ.
ಕಂಬಳವನ್ನು ಅಭೂತಪೂರ್ವವಾಗಿ ಯಶಸ್ಸುಗೊಳಿಸಲು ಕಾರಣಕರ್ತರಾಗಿರುವ ಸಾಲಿನಲ್ಲಿ ಪ್ರಮುಖರಾಗಿರುವ ಕೋಣದ ಯಜಮಾನರುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕುದಿ ಕಂಬಳ ಮುಹೂರ್ತದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದಾರೆ.