ಪೆರ್ಲದಲ್ಲಿ ಮೇ 18,19ಕ್ಕೆ ಕುಟುಂಬಶ್ರೀ ಮಂಜೇಶ್ವರ ತಾಲೂಕು‌ ಮಟ್ಟದ ಅರಂಞಿ ಕಲೋತ್ಸವ

0
365

ಪೆರ್ಲ : ಮಂಜೇಶ್ವರ ತಾಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವ ಅರಂಞಿ ಮೇ 18,19ರಂದು ಎಣ್ಮಕಜೆ ಪಂಚಾಯತಿನ ಪೆರ್ಲದ ಭಾರತೀ ಸದನದಲ್ಲಿ ಜರಗಲಿದೆ. ಮೇ 18 ರಂದು ಬೆಳಗ್ಗೆ 9.30 ಗಂಟೆಗೆ ವೇದಿಕಯೇತರ ಸ್ಪರ್ಧೆಗಳು ನಡೆಯಲಿದ್ದು ಮೇ 19ಕ್ಕೆ ಬೆಳಗ್ಗೆ 9.30 ಗಂಟೆಗೆ ಪೆರ್ಲ ಪೇಟೆಯಲ್ಲಿ ಬೃಹತ್ ಕುಟುಂಬಶ್ರೀ ಶೋಭಾಯಾತ್ರೆ ನಡೆಯಲಿದೆ.ಬಳಿಕ ಕಲೋತ್ಸವದ ಉದ್ಘಾಟನೆ, 10.30 ಗಂಟೆಯಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿದ್ದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಮಂಜೇಶ್ವರ ತಾಲೂಕಿನ 8 ಪಂಚಾಯತಿನ‌ ಕುಟುಂಬಶ್ರೀ ಸಿಡಿಎಸ್ ನ ಸುಮಾರು 500ರಷ್ಟು ಸ್ಪರ್ಥಾರ್ಥಿಗಳು 50ರಷ್ಟು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಸುಮಾರು 1 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಗಡಿನಾಡಿನ ಎಣ್ಮಕಜೆ ಪಂಚಾಯತಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ನಡೆಯುವ ತಾಲೂಕು‌ ಕಲೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿಯ ಅಂತಿಮ‌ ಸಿದ್ಧತೆ ಸಭೆ ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ಕಚೇರಿಯಲ್ಲಿ ಗುರುವಾರ ಜರಗಿತು. ಎಣ್ಮಕಜೆ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆವಹಿಸಿದ್ದು ಪಂಚಾಯತ್ ಸಹಾಯಕ ಕಾರ್ಯದರ್ಶಿ ಗಿರೀಶ್, ತಾಲೂಕು ಕಲಶೋತ್ಸವ ಇನ್ ಚಾರ್ಜರ್ ಲಿಜಿನ್, ಸಚಿನ್ ರಾಜ್ ಬಿ.ಸಿ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲ ಸ್ವರ್ಗ, ಸಿಡಿಎಸ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here