ಸುಬ್ರಹ್ಮಣ್ಯ: ಶ್ರೀನಿಕೇತನ ಟ್ರಸ್ಟ್ (ರಿ.), ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ, ಶ್ರೀ ಅಭಯ ಗಣಪತಿ ದೇವಾಲಯ ಆವರಣ, ಕುಕ್ಕೆಸುಬ್ರಹ್ಮಣ್ಯ ಇದರ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ, ಪುರಾತತ್ವ, ಪ್ರವಾಸೋದ್ಯಮ ಮತ್ತು ಇನ್ನೂ ಅಜ್ಞಾತದಲ್ಲಿರುವ ನೆಲೆಗಳು, ಸ್ಮಾರಕಗಳು, ಚಾರಿತ್ರಿಕ ಅವಶೇಷಗಳ ಕುರಿತಾಗಿ ಲೇಖನಗಳನ್ನು ಆಹ್ವಾನಿಸಲಾಗಿದೆ.
ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಆಸಕ್ತರಿಗೆ ಸದಾವಕಾಶವಾಗಿದೆ. ಈ ಮೂಲಕ ಕಾಲಗರ್ಭದಲ್ಲಿ ಹುದುಗಿಹೋದ ಇನ್ನಷ್ಟು ಚಾರಿತ್ರಿಕ ವಿಚಾರಗಳನ್ನು ಇತಿಹಾಸದ ಪುಟಕ್ಕೆ ಸೇರಿಸುವ ಸಣ್ಣ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಸಂಸ್ಥೆ ಮೂಲಗಳು ಕೋರಿವೆ. ಪ್ರತಿ ತಿಂಗಳ ದಿನಾಂಕ 20ರ ಒಳಗೆ ಲೇಖನಗಳು ತಲುಪುವಂತೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ.
