ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ವಲಯದ ಕುಕ್ಕಿಪಾಡಿ ನೇಸರ ಜ್ಞಾನವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಡಿಸೆಂಬರ್ 28 ರವಿವಾರ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಮಹಿಳಾ ಜಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿ, ಹಿಂದಿನ ಕಾಲದ ಆಚಾರ ವಿಚಾರ, ಭಜನೆ, ಸಂಸ್ಕೃತಿ ನಮಸ್ಕಾರಗಳನ್ನು ಉಳಿಸಲು ಜ್ಞಾನವಿಕಾಸ ಕೇಂದ್ರಗಳು ಸಹಕಾರಿಯಾಗುತ್ತದೆ ಎಂದು ತಿಳಿಸಿ. ಮಾತೃಶ್ರೀ ಹೇಮಾವತಿ ಹೆಗ್ಡೆ ಯವರ ಕನಸಿನ ಕೂಸು, ಆದ ಜ್ಞಾನವಿಕಾಸ ಕೇಂದ್ರದಿಂದ ಇವತ್ತು ಅದೆಷ್ಟೋ ಮಹಿಳೆ ಸ್ವಉದ್ಯೋಗವನ್ನು ಮಾಡಿ ಸಮಾಜದಲ್ಲಿ ಗುರುತಿಸುವಂತವರಾಗಿದ್ದಾರೆ. ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ ನ್ಯಾಸಕಿ ಸಂಧ್ಯಾ ಶಿಕ್ಷಣದಲ್ಲಿ ತಾಯಂದಿರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ತಾಲೂಕಿನ ಜನ ಜಾಗ್ರತಿ ವೇದಿಕೆ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ. ಕುಕ್ಕಿಪಾಡಿ ಪಂಚಾಯಿತಿ ಅಧ್ಯಕ್ಷರಾದ ಶೇಖರ್, ಚೆನ್ನೆತೋಡಿ ಪಂಚಾಯಿತಿ ಅಧ್ಯಕ್ಷರಾದ ವನಿತಾ, ಒಕ್ಕೂಟ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ,,ಪೂಜಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಉಪಾಧ್ಯಕ್ಷರು ಗೋಪಾಲ ಕೃಷ್ಣ ಗೋಂಜಾ,ಪ್ರಕಾಶ್ ಜನ ಜಾಗ್ರತಿ ಸದಸ್ಯರು,ವಲಯದ ಮೇಲ್ವಿಚಾರಕಿ ಹರಿನಾಕ್ಷಿ,ಜಗದೀಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಜಲಜಕ್ಷಿ ಸೇವಾ ಪ್ರತಿನಿಧಿ, ಭಾರತೀ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ವಿದ್ಯಾ ಸ್ವಾಗತಿಸಿ, ಯಶೋಧ ವರದಿ ವಾಚಿಸಿ, ಸೇವಾ ಪ್ರತಿನಿಧಿ ಹೇಮಲತಾ ವಂದಿಸಿದರು,ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

