ಮೂಡುಬಿದಿರೆ: ತುಳುನಾಡಿನ ಮೂಲ ಜನಾಂಗದಲ್ಲಿ ಹುಟ್ಟಿದ ಕಾರಣಿಕ ಪುರುಷರ ಚರಿತ್ರೆಯನ್ನು ಲೋಕಕ್ಕೆ ಸಾರುವುದಕ್ಕೆ ಮೂಡುಬಿದಿರೆಯ ಯಕ್ಷ ಸಂಭ್ರಮ ಕಾರ್ಯಕ್ರಮ ಸಿದ್ಧತೆ ನಡೆಸುತ್ತಿದೆ. ಸೆ.1ರಂದು ಮಧ್ಯಾಹ್ನ 2 ಗಂಟೆಯಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ʻಕುಲದೈವೋ ಬ್ರಹ್ಮʼ ಎಂಬ ಯಕ್ಷಗಾನ ಕಥಾನಕ ನಡೆಯಲಿದೆ. ಪ್ರವೇಶ ಉಚಿತವಾಗಿರಲಿದ್ದು, ಗೆಜ್ಜೆಗಿರಿ ಮೇಳದ ಅಭಿಮಾನಿಗಳು ಈ ಯಕ್ಷಗಾನ ಕೂಟ ಆಯೋಜಿಸಿರುತ್ತಾರೆ. ತುಳುನಾಡಿನ ಮೂಲ ಸಮುದಾಯಗಳಾದ ಬಿಲ್ಲವ, ಬಂಟ, ಮುಗೇರ ಹಾಗೂ ಆದಿದ್ರಾವಿಡ ಜನಾಂಗದ ಕಾರಣಿಕ ಪುರುಷರುಗಳ ಇತಿಹಾಸವನ್ನು ಸಾರುವ ತುಳು ಯಕ್ಷ ಪರ್ಬವನ್ನು ಆಯೋಜಿಸಲಾಗಿದೆ. ಬೆರ್ಮೆರ್ ಆಶೀರ್ವಾದದಿಂದ ಹುಟ್ಟುವ ಬ್ರಹ್ಮ ಬೈದ್ಯೆರ್, ಬ್ರಹ್ಮ ಮುಗೇರರು, ತುಳುನಾಡ ಸಿರಿ ಹಾಗೂ ಸತ್ಯ ಸಾರಮಾನಿಗಳ (ಕಾನದ ಕಟದ) ಜೀವನ ಚರಿತ್ರೆಯನ್ನು ಆಧರಿಸಿದ, ನೀವು ಇದುವರೆಗೆ ಕಾಣದ ವಿನೂತನ ಶೈಲಿಯ ಕಥಾನಾಟಕವನ್ನು ಈ ಯಕ್ಷಗಾನದಲ್ಲಿ ಕಾಣಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ತೆಂಕುತಿಟ್ಟಿನ 60ಕ್ಕೂ ಮಿಕ್ಕಿ ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಯ ಯಶಸ್ವೀ ಜೋಡಿ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ, ನಿರ್ದೇಶಿಸುವ ಯೋಗೀಶ್ ರಾವ್ ಚಿಗುರುಪಾದೆ ಪದ್ಯ ರಚನೆಯ ಬಹು ನಿರೀಕ್ಷೆಯ ತುಳು ಪ್ರಸಂಗ ʻಕುಲದೈವೋ ಬ್ರಹ್ಮʼ ಕೆಮ್ಮಲೆ ಬೆರ್ಮೆರೆ ಕ್ಷೇತ್ರದ ಇತಿಹಾಸ ಸಹಿತ ಅಲೇರಿ ಕ್ಷೇತ್ರ, ಮೇಲ್‌ಬಂಗಾಡಿ ಕ್ಷೇತ್ರ, ಕೋಟೆಬಾಗಿಲು ಕ್ಷೇತ್ರ, ಪಾಜೆಗುಡ್ಡೆ ಕ್ಷೇತ್ರ, ಮೂಜೂರು ಮುಗೇರ್ಕಳ ಕ್ಷೇತ್ರ ಸಹಿತ ಹಿರ್ಗಾನ ಪಾಡಿ ಗರಡಿ ಕ್ಷೇತ್ರದ ಇತಿಹಾಸದ ಪ್ರಸಂಗ, ಮೂಲ ತುಳುವರ ಸಿರಿವಂತಿಕೆಯನ್ನು ಈ ಕಥಾಹಂದರದಲ್ಲಿ ಹೆಣೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸೆ.1ರಂದು ಮೂಡುಬಿದಿರೆಯಲ್ಲಿ ತುಳುನಾಡಿನ ಮೂಲಸಮುದಾಯಗಳ ಕಾರಣಿಕ ಪುರುಷರ ಇತಿಹಾಸ ಆಧಾರಿತ ʻಕುಲದೈವೋ ಬ್ರಹ್ಮʼ ಯಕ್ಷಗಾನ
RELATED ARTICLES