ಬಾರ್ಕೂರು: ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 14ರಿಂದ ರವರೆಗೆ ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಕೆಂಡ ಸೇವೆ ನಡೆಯಲಿದೆ.
ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಕುಲದೇವತಾ ಸುತ್ತಿ ಲೇಖನ ಯಜ್ಞ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಿ. 25ರಂದು ಶ್ರೀ ಕ್ಷೇತ್ರದಲ್ಲಿ ಕುಂಭಾಸಿ ಪಾರ್ವತಿ ಮತ್ತು ರಾಜೇಂದ್ರ ಶೆಟ್ಟಿಗಾರ್ ಅವರು ಸುತ್ತಿ ಯಜ್ಞದ ಪುಸ್ತಕ ಮತ್ತು ಲೇಖನಿಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸಿ.ಜಯರಾಮ್ ಶೆಟ್ಟಿಗಾರ್ ಲೇಖನ ಯಜ್ಞದ ಮಹತ್ವ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಶ್ರೀನಿವಾಸ ಶೆಟ್ಟಿಗಾರ್ ಮಾತನಾಡಿ, ಈ ಸುತ್ತಿ ಲೇಖ ಯಜ್ಞದಲ್ಲಿ ಸಮಸ್ತ ಸಮಾಜ ಬಾಂಧವರು ಕೈಜೋಡಿಸುವಂತೆ ಕರೆ ನೀಡಿದರು.
ಕವಿತಾ ಜೆ.ಎಸ್. ಮತ್ತು ಡಾ. ಶಿವಪ್ರಸಾದ್ ಕೆ. ಲೇಖನ ಯಜ್ಞದ ಸುತ್ತಿಗಳನ್ನು ಪಠಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.