Wednesday, January 15, 2025
Homeಮುಂಬೈಕುಲಾಲ ಸಂಘ ಪಿಂಪ್ರಿ ಚಿಂಚವಡ್ 14ನೇ ವರ್ಷದ ವಾರ್ಷಿಕ ಮಹಾಸಭೆ: ಅರಶಿನ ಕುಂಕುಮ, ಭಜನಾ ಕಾರ್ಯಕ್ರಮ

ಕುಲಾಲ ಸಂಘ ಪಿಂಪ್ರಿ ಚಿಂಚವಡ್ 14ನೇ ವರ್ಷದ ವಾರ್ಷಿಕ ಮಹಾಸಭೆ: ಅರಶಿನ ಕುಂಕುಮ, ಭಜನಾ ಕಾರ್ಯಕ್ರಮ

ಮುಂಬೈ: ಕುಲಾಲ ಸಂಘ ಪಿಂಪ್ರಿ ಚಿಂಚವಡ್ 14ನೇ ವರ್ಷದ ವಾರ್ಷಿಕ ಮಹಾಸಭೆ ಅಂಗವಾಗಿ ಮಹಿಳಾ ವಿಭಾಗದ ವತಿಯಿಂದ ಸಮಾಜದ ಬಾಂಧವರ ಮಹಿಳೆಯರಿಗಾಗಿ ಹಮ್ಮಿಕೊಂಡ ಅರಶಿನ ಕುಂಕುಮ ಕಾರ್ಯಕ್ರಮ ಹಾಗೂ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಡಿಸೆಂಬರ್ 29ರಂದು ಸಾವಿತ್ರಿಬಾಯಿ ಫುಲೆ ಸ್ಮಾರಕ ಸಭಾಂಗಣ ಪಿಂಪ್ರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಿತು.

ಮಹಿಳಾ ವಿಭಾಗದ ಮನಿಷಾ ಮೂಲ್ಯ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು. ಅಲಂಕೃತ ದೇವರ ಮಂಟಪದೆದುರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಮಿತಿಯ ಸದಸ್ಯರು ಸೇರಿದ್ದ ಮಹಿಳೆಯರಿಗೆ ಅರಿಶಿಣ ಕುಂಕುಮ ಹಚ್ಚಿ ನೆನಪಿನ ಕಾಣಿಕೆಯನ್ನು ನೀಡಿ ಶುಭ ಹಾರೈಸಿದರು.

ನಂತರ ಕುಲಾಲ ಸಂಘ ಪಿಂಪ್ರಿ ಚಿಂಚವಡ್ ಇದರ 14ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷರಾದ ಅಡ್ವೊಕೇಟ್ ಅಪ್ಪು ಮೂಲ್ಯರ ಮಾರ್ಗದರ್ಶದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಂಘದ ಅಧ್ಯಕ್ಷ ರವಿ ಮೂಲ್ಯ ಮಾತನಾಡಿ, ಕುಲಾಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಿ ಸಂಘದ ಉತ್ಸಾಹವನ್ನು ಹೆಚ್ಚಿಸಿದ್ದು, ಮುಂದಿನ ವರ್ಷಗಳಲ್ಲಿ ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾದ ಅಗತ್ಯ ಇದೆ ಎಂದರಲ್ಲದೆ, ಮುಂದೆಯೂ ಸಮಾಜ ಬಾಂಧವರೆಲ್ಲರ ಸಹಕಾರ ಪ್ರೋತ್ಸಾಹ ಸಂಘದ ಮೇಲಿರಲಿ ಎಂದರು.

ಜ್ಯೋತಿ ಕೋ ಆಪ್‌ ಕ್ರೆಡಿಟ್‌ ಸೊಸೈಟಿ ಮುಂಬೈಯ ಚೇರ್ಮಾನ್‌ ಗಿರೀಶ್ ಬಾಬು ಸಾಲಿಯಾನ್ ಮಾತನಾಡಿ, ಕುಲಾಲ ಬಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಇದು ಸಂಘಕ್ಕೆ ಖುಷಿ ತರುವ ವಿಷಯವಾಗಿದೆ. ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಕುಲಾಲ ಬಾಂಧವರು ಒಗ್ಗಟ್ಟಿನೊಂದಿಗೆ ಬೆಸೆದುಕೊಂಡು ಸಂಘದ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕೈಗೂಡಿಸಬೇಕು ಎಂದರು.

ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾಘು ಮೂಲ್ಯ ಮುಂಬೈ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಕೈಜೋಡಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಪರಿಸರದಲ್ಲಿರುವ ಎಲ್ಲಾ ಕುಲಾಲ ಬಂದು ಬಾಂಧವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಬೆಳೆಯುತ್ತಿರುವ ಪಿಂಪ್ರೀ ಚಿಂಚವಡ್ ಪರಿಸರದಲ್ಲಿ ಯುವಕರು ಮುಂದೆ ಬಂದು ಸಂಘವನ್ನು ಒಗ್ಗೂಡಿಸಬೇಕು ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ಅಡ್ವಕೇಟ್ ಅಪ್ಪು ಮೂಲ್ಯ ಮಾತನಾಡಿ, ಸಂಘ ಕೊಂದು ಸ್ವಂತ ಕಚೇರಿ ಅವಶ್ಯಕತೆ ಇದೆ ಎಂದರು. ಸಂಘದ ರಕ್ಷಕರಾದ ಸಂಜೀವ ಮೂಲ್ಯ ಸಭೆಗೆ ಮಾರ್ಗದರ್ಶನ ನೀಡಿದರು.

ತುಳು ಕೂಟ ಪಿಂಪ್ರಿ ಚಿಂಚವಡ್‌ನ ಅಧ್ಯಕ್ಷ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಯ ಮೂಲ್ಯ ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಸಂಘದ ಕೋಶ ಅಧಿಕಾರಿ ಕಿಶೋರ್ ಮೂಲ್ಯ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು. ಕುಲಾಲ ಮಹಿಳಾ ಮಂಡಲ ಮಂಡಲದ ಸದಸ್ಯರು ಪ್ರಾರ್ಥನೆ ಮಾಡಿದರು. ಕುಮಾರಿ ಅಂಕಿತರವರು ಸ್ವಾಗತ ಭಾಷಣ ಮಾಡಿದರು. ಉಪಾಧ್ಯಕ್ಷ ದಿನೇಶ್ ಮೂಲ್ಯ ವಂದಿಸಿದರು.

ಮನೋರಂಜನೇಯ ಅಂಗವಾಗಿ ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಬೋಜನದೊಂದಿಗೆ ಸಮಾರೋಪಗೊಂಡಿತು. ಕಾರ್ಯಕ್ರಮದಲ್ಲಿ ಸಮಾಜದ ಕುಲಾಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular