Wednesday, September 11, 2024
Homeಬೆಂಗಳೂರು10 ವರ್ಷ ಅಲ್ಲ, 10 ತಿಂಗಳು ಮುಂದುವರಿಯಿರಿ ನೋಡೋಣ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲು

10 ವರ್ಷ ಅಲ್ಲ, 10 ತಿಂಗಳು ಮುಂದುವರಿಯಿರಿ ನೋಡೋಣ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ನಾಯಕರು ಇಂದು ಜಂಟಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಈ ಇಡೀ ಸರ್ಕಾರವನ್ನು ಕಿತ್ತೊಗೆಯಬೇಕು. ನಾವು ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿದ್ದೇವೆ. ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕ್ರಿಯಾಶೀಲ ಯುವಕ ವಿಜಯೇಂದ್ರ ನೇತೃತ್ವದಲ್ಲಿ ರಾಧಾಮೋಹನ್‌ ಅಗರ್ವಾಲ್‌ ಸೂಚನೆ ಮೇರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಕನಕಪುರದಲ್ಲಿ ಒಂದು ಬ್ಲಾಕ್ ಅಂಡ್ ವೈಟ್ ಟಿವಿ ಇಟ್ಟುಕೊಂಡು ಸಂಪಾದನೆ ಮಾಡಿದ್ದು ಅಲ್ವಾ? ಅಂದು ರಾಮಕೃಷ್ಣ ಹೆಗಡೆ ಕಾಲದಲ್ಲಿ ರಘುಪತಿ ಭಟ್ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ನಾವು 2006ರಲ್ಲಿ ಮಾಡಿದ್ದ ಸಮ್ಮಿಶ್ರ ಸರ್ಕಾರ ಸರಿಯಾಗಿದ್ರೆ 2008ರಲ್ಲಿ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ಅಂದು ಬೇರೆ ವ್ಯವಸ್ಥೆ ಇತ್ತು. ನಾವು ಮಾಡಿದ ಯಡವಟ್ಟಿನಿಂದ ಅಂದು ಅಧಿಕಾರಕ್ಕೆ ಬಂದ್ರಿ. 2018ರಲ್ಲಿ ನೀವು ನಮ್ಮ ಮನೆಗೆ ಬಂದ್ರಿ. ನಾನು ಅರ್ಜಿ‌ ಹಿಡಿದುಕೊಂಡು ಬಂದಿರಲಿಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನೀವಲ್ಲ. ಅವರನ್ನು ಕೆಳಗೆ ಇಳಿಸಿದ್ದು ಏಕೆ? ಅಂದು ನಾವು ಮಾಡಿದ ಸರ್ಕಾರದಿಂದ ಎರಡು ಪಕ್ಷಗಳು ಬೆಳೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಸಹಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಮಾಡಿ ಬಿಜೆಪಿ ಕೂಡ ಬೆಳೆದಿದೆ. ಸಿದ್ದರಾಮಯ್ಯರವರೇ ನಾನೇ 10 ವರ್ಷ ಸಿಎಂ ಅಂತೀರಲ್ಲ. ಮುಂದಿನ 10 ತಿಂಗಳು ಮುಂದುವರಿಯಿರಿ ನೋಡೋಣ ಎಂದು ಕುಮಾರಸ್ವಾಮಿ ಸವಾಲೊಡ್ಡಿದ್ದಾರೆ.
ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಪಕ್ಷ ನಾಯಕ ಆರ್.‌ ಅಶೋಕ್‌ ಸಹಿತ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular