ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ರಿ ಉಡುಪಿ ಇವರು ಕೊಡ ಮಾಡಲ್ಪಡುವ ೨೦೨೪ ರ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಕುಮಾರಿ ಸಂಚಿತಾ ಆಚಾಯ೯ ಆಯ್ಕೆಯಾಗಿರುತ್ತಾರೆ.
ದಿನಾಂಕ 05.12 .2024ರ ಕೋಟ ಶಿವರಾಮ ಕಾರಂತರ ಥೀಮ್ ಪಾಕ೯ನಲ್ಲಿ ನಡೆಯಲ್ಪಡುವ ಕಾಯ೯ಕ್ರಮ ದಲ್ಲಿ ಪ್ರಶಸ್ತಿ ಪ್ರಧಾನ ಕಾಯ೯ ನಡೆಯಲಿದೆ.
ಕುಮಾರಿ ಸಂಚಿತಾ ಆಚಾಯ೯ ಇವರು ಚಂದ್ರು ಆಚಾಯ೯ ಹಾಗೂ ಶ್ರೀಮತಿ ಪ್ರೇಮಾಂಜಲಿ ಆಚಾಯ೯ ಯವರ ಪುತ್ರಿಯಾಗಿದ್ದು ಮೂಲತ: ವಿರಾಜಪೇಟೆ ಸಂತ ಎನ್ ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಕಲಿಯುತ್ತಿದ್ದಾರೆ.
ಸಾಂಸ್ಕೃತಿಕ ಕಾಯ೯ಕ್ರಮ ದಲ್ಲಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸುತ್ತಿರುವ ಕುಮಾರಿ ಸಂಚಿತಾ ಆಚಾಯ೯ ತನ್ನ ಎಳೆಯ ವಯಸ್ಸಿನಲ್ಲೇ ಸಾಧನೆಯ ಶಿಖರವನ್ನೇರಲು ಹೆಜ್ಜೆಯನ್ನಿಡುತ್ತಿದ್ದಾಳೆ.
ಜಾನಪದ,ನೃತ್ಯ,ಸಾಂಸ್ಕೃತಿಕ ,ಭರತನಾಟ್ಯದಲ್ಲಿ ಸೆಮಿ ಕ್ಲಾಸಿಕಲ್ ಹಾಗೂ ಇನ್ನಿತರ ತರಭೇತಿ ಪಡೆದು ತಾಲೂಕು,ಜಿಲ್ಲೆಯಲ್ಲದೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ.
ನಾಟ್ಯ ಮಯೂರಿ ಟ್ರಸ್ಟ್ ವಿರಾಜಪೇಟೆಯಲ್ಲಿ ನೃತ್ಯ ತರಭೇತಿ ಪಡೆಯುತ್ತಿರುವ ಕುಮಾರಿ ಸಂಚಿತಾ ಆಚಾಯ೯ ಇವರಿಗೆ ರಾಜ್ಯ ಮಟ್ಟದ ಸ್ವಾಮೀ ವಿವೇಕಾನಂದ ಸದ್ಭಾವನಾ ಪ್ರಶಸ್ತಿ, ಕರುನಾಡ ಭೂಷಣ,ಸುವಣ೯ ಶ್ರೀ ಕನ್ನಡ ಪ್ರಶಸ್ತಿ ಪಡೆದಿರುತ್ತಾಳೆ.