ಬೆಳ್ಮಣ್ ಕುಂಭ ನಿಧಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 25ನೇ ಸ ಸ್ವಸಹಾಯ ಸಂಘ ಸುಬ್ರಹ್ಮಣ್ಯ, ಇದರ ಉದ್ಘಾಟನಾ ಕಾರ್ಯಕ್ರಮ ಸೊಸೈಟಿಯ ನಿರ್ದೇಶಕ ರಾಜೇಶ್ ಸಾಂತೂರು ಮನೆಯಲ್ಲಿ ನೆರವೇರಿತು. ಸೊಸೈಟಿ ಅಧ್ಯಕ್ಷ ಕುಶ ಆರ್. ಮೂಲ್ಯ ಉದ್ಘಾಟಿಸಿ ಮಾತನಾಡಿ ಗ್ರಾಹಕರು ಉಳಿತಾಯಕ್ಕೆ ಹೆಚ್ಚು ಒತ್ತು ಕೊಟ್ಟಗಾ ಮಾತ್ರ ಜೀವನದಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮವಾಗಲು ಸಾಧ್ಯ. ಕಳೆದ ಎರಡು ತಿಂಗಳಲ್ಲಿ ಸೊಸೈಟಿಯ ಸದಸ್ಯರ ಬೆಂಬಲ ಶ್ಲಾಘನೀಯ ಎಂದರು.
ಉಪಾಧ್ಯಕ್ಷ ಜಗನ್ನಾಥ ಕುಲಾಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್, ಸೇವಾ ಪ್ರತಿನಿಧಿ ಆಶಾ ವರದರಾಜ್ ಸ್ವಸಹಾಯ ಸಂಘದ ಅಧ್ಯಕ್ಷೆ ಸುಜಾತ ಕಾರ್ಯದರ್ಶಿ ಶುಭಾ ಸಂಘದ ಸದಸ್ಯರು ಉಪಸ್ಥಿತರಿದ್ದರು.