ಅವಿಭಜಿತ ಜಿಲ್ಲೆಯಲ್ಲಿ ದೈವಾರಾದನೆ ಮೂಲಕ ಎಲ್ಲಾ ಜಾತಿ ಸಮುದಾಯಗಳಿಗೂ ಸಮಾನ ಸೇವೆ ನೀಡಲು ಅವಕಾಶ ದೊರೆತಿದ್ದು, ಕೊರ‍್ದಬ್ಬು ದೈವಸ್ಥಾನ ಕೂಡಾ ಎಲ್ಲರ ಆರಾಧನಾ ಕೇಂದ್ರವಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಇಲ್ಲಿನ ಕುಮ್ಡೇಲು ಎಂಬಲ್ಲಿ ರೂ ೧.೨೫ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಶ್ರೀ ನಾಗಬ್ರಹ್ಮ ಸನ್ನಿಧಿ ಕೊರ‍್ದಬ್ಬು ದೈವಸ್ಥಾನಕ್ಕೆ ಗುರುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಳಲಿ ಸುಬ್ರಹ್ಮಣ್ಯ ತಂತ್ರಿ ಪೌರೋಹಿತ್ಯದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಭಾಸ್ಕರ ಚೌಟ ಕುಮ್ಡೇಲು ಶಿಲಾನ್ಯಾಸ ನೆರವೇರಿಸಿದರು.
ಗುತ್ತಿಗೆದಾರ ಡಾ.ಸಂಜೀವ ದಂಡೆಕೇರಿ ಕೊರ‍್ದಬ್ಬು ದೈವಾರಾಧನೆ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಎಲ್ಲಾ ಜಾತಿ ಧರ್ಮಗಳಿಗೂ ದೈವಾರಾಧನೆಯಲ್ಲಿ ಗುರುತಿಸಿ ಗೌರವಿಸುವ ಪದ್ಧತಿ ಬೆಳೆದು ಬಂದಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಾಲಕೃಷ್ಣ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೆ.ಪೂಂಜ, ಉದ್ಯಮಿ ರಾಜಶೇಖರ ಚೌಟ, ಬಬ್ಬುಸ್ವಾಮಿ ಮೂಲಸ್ಥಾನ ಅಧ್ಯಕ್ಷ ಶಿವಪ್ಪ ನಂತೂರು, ಸಮಿತಿ ಗೌರವಾಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ, ಕಾರ್ಯಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಗಣೇಶ ಸುವರ್ಣ ತುಂಬೆ, ಅಧ್ಯಕ್ಷ ಉಮೇಶ ಸಾಲ್ಯಾನ್ ಶುಭ ಹಾರೈಸಿದರು.
ಗುರಿಕಾರರಾದ ಕೆ.ಮೋನಪ್ಪ ಲುಮ್ಡೇಲು, ಕೆ.ವೆಂಕಪ್ಪ ಕುಡ್ಮೇಲು, ಪ್ರಮುಖರಾದ ಕೆ.ಪಿ.ಶೆಟ್ಟಿ ಮೊಡಂಕಾಪು, ದೇವಸ್ಯ ಪ್ರಕಾಶ್ಚಂದ್ರ ರೈ, ಜಗನ್ನಾಥ ಚೌಟ ಬದಿಗುಡ್ಡೆ, ಅನಿಲ್ ಪಂಡಿತ್, ಮನೋಜ್ ಆಚಾರ್ಯ ನಾಣ್ಯ, ಭರತ್ ಕುಮ್ಡೇಲು, ಜಗದೀಶ ಪೂಜಾರಿ ಕುಮ್ಡೇಲು, ಉಮೇಶ ಶೆಟ್ಟಿ ಬರ್ಕೆ ಮತ್ತಿತರರು ಇದ್ದರು.
ಪ್ರಧಾನ ಸಂಚಾಲಕ ಟಿ.ತಾರನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಹರಿಕೃಷ್ಣ ಪಂಡಿತ್ ವಂದಿಸಿದರು. ರಾಜೇಶ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.