Saturday, June 14, 2025
Homeರಾಜ್ಯಕುಂದಾಪುರ : ದ್ರಾವಿಡ ಬ್ರಾಹ್ಮಣ ಪರಿಷತ್ ಆಯೋಜಿಸಿದ್ದ 100ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ

ಕುಂದಾಪುರ : ದ್ರಾವಿಡ ಬ್ರಾಹ್ಮಣ ಪರಿಷತ್ ಆಯೋಜಿಸಿದ್ದ 100ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಆಯೋಜಿಸಿದ್ದ 100ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ ಕಾರ್ಯಕ್ರವು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಚಂದ್ರಶೇಖರ ಹೊಳ್ಳ 100ನೇ ವಿಪ್ರವಾಣಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಅನಾವರಣ ಗೊಳಿಸಿ ಮಾತನಾಡಿ ವೇದಗಳ ಅನುಷ್ಠಾನ ಮತ್ತು ಸನಾತನ ಸಂಸ್ಕೃತಿಯ ಅನುಸಾರವಾಗಿ ಬದುಕುವುದು ಬ್ರಾಹ್ಮಣರ ಕರ್ತವ್ಯವಾಗಿದೆ ನಮ್ಮ ಯುವಕರು ಸಂಸ್ಕೃತಿಯ ಆಚಾರ ವಿಚಾರಗಳನ್ನು ಅರಿತುಕೊಂಡು ಪಾಲಿಸಬೇಕು ಇಲ್ಲವಾದರೆ ಮುಂದಿನ ಜನಾಂಗವು ಪಶ್ಚಾತಾಪ ಪಡಬೇಕಾಗುತ್ತದೆ. ಯಾವುದೇ ಉದ್ಯೋಗ ವ್ಯವಹಾರ ಇರಲಿ ನಮ್ಮ ತನವನ್ನು ಬಿಡದೆ ಶ್ರದ್ಧೆಯಿಂದ ಬ್ರಾಹ್ಮಣರು ಕರ್ತವ್ಯ ನಿರತರಾಗಬೇಕೆಂದು ಎಂದರು.

ವೇದಿಕೆಗೆ ವಿಶೇಷ ರೀತಿಯಲ್ಲಿ ವಿಪ್ರವಾಣಿಯನ್ನು ತರಲಾಯಿತು. ಕಿರಿಮಂಜೇಶ್ವರದ ಉದ್ಯಮಿ ಉಮೇಶ್ ಶಾನುಭಾಗ್ ಶುಭ ಹಾರೈಸಿದರು.

ಶುಭಚಂದ್ರ ಹತ್ವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘಟನೆಯ ಮಹತ್ವವನ್ನು ವಿವರಿಸಿದರು ಮತ್ತು ಬ್ರಾಹ್ಮಣರು ಸಂಘಟನೆಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ವಿಪ್ರವಾಣಿ ಸಂಪಾದಕ ಶಂಕರರಾವ್ ಕಾಳಾವರ ಪ್ರಾಸ್ತಾವಿಕ ಮಾತುಗಳೊಂದಿಗೆ ಬ್ರಾಹ್ಮಣ ಸಂಘಟನೆ ನಡೆದು ಬಂದ ದಾರಿಯನ್ನು ವಿವರಿಸಿದರು. ವಿಪ್ರವಾಣಿ ವಿಶೇಷ ಸಂಚಿಕೆಯ ವೈಶಿಷ್ಟ್ಯಗಳನ್ನು ತಿಳಿಸಿದರು.

ಮಹಿಳಾ ಅಧ್ಯಕ್ಷೆ ಸಂಧ್ಯಾ ಉಡುಪ ಮಾತನಾಡಿ ಶಂಕರ ಜಯಂತಿ ಪ್ರಯುಕ್ತ ಆದಿ ಗುರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಮಹಿಳಾ ಘಟಕದ ವತಿಯಿಂದ ಆದರ್ಶ ದಂಪತಿ ಸ್ಪರ್ಧೆ ನೆರವೇರಿತು. ಪರಿಷತ್ತಿನ ಮಹಿಳಾ ವೇದಿಕೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಭರತನಾಟ್ಯ ಪ್ರದರ್ಶನ ನೆಡೆಯಿತು ಎಂದರು.

ಆದರ್ಶ ದಂಪತಿಗಳು 2024 ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಬಸ್ರೂರು ವಲಯದ ಭಾಸ್ಕರ ಉಡುಪ ಮತ್ತು ನಿರ್ಮಲಾ ಉಡುಪ ದ್ವಿತೀಯ ಸ್ಥಾನವನ್ನೂ ಕೊಲ್ಲೂರು ವಲಯದ ರಾಘವೇಂದ್ರ ಐತಾಳ್ ಮತ್ತು ಲಕ್ಷ್ಮೀ ಐತಾಳ್ ಪಡೆದರು.

ವಿಪ್ರವಾಣಿಯ ಪೂರ್ವ ಸಂಪಾದಕರು, ಸಹಸಂಪಾದಕರು, ಎಲ್ಲ ವಲಯಗಳ ಅಧ್ಯಕ್ಷರು ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ತಾಲೂಕು ಗೌರವಾಧ್ಯಕ್ಷ ಅನಂತ ಪದ್ಮನಾಭ ಬಾಯಿರಿ, ಕೋಶಾಧಿಕಾರಿ ರಘುರಾಮ ರಾವ್, ಕೋಟೇಶ್ವರ ವಲಯ್ಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ನಾಗೂರು ಸ್ವಾಗತಿಸಿದರು. ಯುವ ವೇದಿಕೆಯ ಅಧ್ಯಕ್ಷ ಅವನೀಶ ಹೊಳ್ಳ ವೇದಘೋಷ ಗೈದರು. ಕುಮಾರಿ ಪಾವನಿ ಮತ್ತು ಅಶ್ವಿನಿ ಪ್ರಾರ್ಥಿಸಿದರು ಸಂಘಟನಾ ಕಾರ್ಯದರ್ಶಿ ಸತೀಶ ಅಡಿಗ ವಂದಿಸಿದರು. ಡಾ. ವೆಂಕಟರಾಮ್ ಭಟ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು

RELATED ARTICLES
- Advertisment -
Google search engine

Most Popular