Monday, July 15, 2024
Homeರಾಜಕೀಯಕುಂದಾಪುರ: ಕೊಚ್ಚುವೇಲಿ ಮುಂಬೈ ಲೋಕಮಾನ್ಯ ತಿಲಕ್ ರೈಲು ನಿಲುಗಡೆ ಶಾಸಕರಿಂದ ಸ್ವಾಗತ

ಕುಂದಾಪುರ: ಕೊಚ್ಚುವೇಲಿ ಮುಂಬೈ ಲೋಕಮಾನ್ಯ ತಿಲಕ್ ರೈಲು ನಿಲುಗಡೆ ಶಾಸಕರಿಂದ ಸ್ವಾಗತ

ಕ್ಷೇತ್ರದ ಹಲವು ಕಾಲದ ಬೇಡಿಕೆಯಾದ ಕೇರಳದ ಕೊಚುವೇಲಿ-ಮುಂಬೈ ಲೋಕಮಾನ್ಯ ತಿಲಕ್ ರೈಲು ಕುಂದಾಪುರದಲ್ಲಿ ನಿಲುಗಡೆ ನೀಡಿದ್ದು ಭಾರತೀಯ ಜನತಾ ಪಾರ್ಟಿ ಕುಂದಾಪುರ ವತಿಯಿಂದ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರಿಂದ ಸ್ವಾಗತಿಸಲಾಯಿತು.

ಈ ರೈಲಿನಿಂದ ಕೇರಳದ ಶಬರಿಮಲೆಗೆ ಮತ್ತು ಕೊಲ್ಲೂರು ಮತ್ತು ಮುಂಬೈಗೆ-ಕುಂದಾಪುರ ಪ್ರಯಾಣಿಸುವವರಿಗೆ ಅನುಕೂಲವಾಗಿದ್ದು ಈ ರೈಲಿನ ನಿಲುಗಡೆ ಕುಂದಾಪುರಕ್ಕೆ ನೀಡಿದ ಮಾನ್ಯ ಸಂಸದರು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕೆ ಎಸ್, ಸತೀಶ್ ಪೂಜಾರಿ ವಕ್ವಾಡಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು ಮತ್ತು ಪದಾಧಿಕಾರಿಗಳು ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ ಮತ್ತು ಪದಾಧಿಕಾರಿಗಳು, ಪುರಸಭೆ ಸದಸ್ಯರು, ರೈಲ್ವೆ ಹಿತರಕ್ಷಣೆ ಸಮಿತಿಯ ಗಣೇಶ್ ಪುತ್ರನ್, ವಿವೇಕ್ ನಾಯಕ್, ರಾಘವೇಂದ್ರ ಶೇಟ್ ಮತ್ತು ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular