ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಕುಂದಾಪುರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 2ರಲ್ಲಿ ಹಾಗೂ ಮದ್ದುಗುಡ್ಡೆ ವಾರ್ಡ್ ನಲ್ಲಿರುವ ‘ಮೂರು ಮುತ್ತು (ಕುಳ್ಳಪ್ಪು) ನಾಟಕ ತಂಡ’ದ ಸತೀಷ ಪೈ ಮತ್ತು ಸಂತೋಷ ಪೈ ಅವರ ಮನೆಗೆ ತೆರಳಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ ಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಕುಂದಾಪುರ ಪುರಸಭಾ ಸದಸ್ಯ ರಾಘವೇಂದ್ರ ಖಾರ್ವಿ, ರಮೇಶ್ ಪೂಜಾರಿ, ನಾರಾಯಣ ಖಾರ್ವಿ, ಸತೀಶ್ ಮೇಸ್ತ, ದಶಮಿ ರಾಘವೇಂದ್ರ ಖಾರ್ವಿ, ಮಣಿರಾಜ ಖಾರ್ವಿ, ದಯಾನಂದ ಖಾರ್ವಿ, ಸಂತೋಷ ಖಾರ್ವಿ, ಗುರುರಾಜ್ ಖಾರ್ವಿ, ಪ್ರಶಾಂತ ಖಾರ್ವಿ, ಪ್ರಕಾಶ ಮೊಗವೀರ, ನಾಗೇಶ ಪೂಜಾರಿ, ಮಂಜುನಾಥ ಪೂಜಾರಿ, ರಾಜಕುಮಾರ ಮೇಸ್ತ, ಪವನ ಮದ್ದುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.