Monday, January 13, 2025
Homeಕುಂದಾಪುರಕುಂದಾಪುರ: ಶ್ರೀ ಧರ್ಮಸ್ಥಳ ಮೇಳ ಯಕ್ಷಗಾನ ಬಯಲಾಟ, ಭವ್ಯ ಮೆರವಣಿಗೆ

ಕುಂದಾಪುರ: ಶ್ರೀ ಧರ್ಮಸ್ಥಳ ಮೇಳ ಯಕ್ಷಗಾನ ಬಯಲಾಟ, ಭವ್ಯ ಮೆರವಣಿಗೆ

ಕುಂದಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಕಾರುಣ್ಯಾಂಬುಧಿ ಶ್ರೀ ರಾಮ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮ ಗೀತಾ ಗೋಕುಲ ಜಿ ಶೆಟ್ಟಿ ಉಪ್ಪುಂದ ಶಾಲೆಬಾಗಿಲು ಅವರ ಮೆನೆಯ ವಠಾರದಲ್ಲಿ ಸೋಮವಾರ ನಡೆಯಿತು.
ಉಪ್ಪುಂದ ವೆಂಕಟರಮಣ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಗಣಪತಿ ದೇವರನ್ನು ಭವ್ಯ ಮೆರವಣಿಗೆ ಮೂಲಕ ಚೌಕಿಗೆ ಕರೆತರಲಾಯಿತು.ಚಂಡೆ ವಾದನ ಕುಣಿತ ಭಜನೆ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.ಧಾರ್ಮಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆ ರೀತಿಯ ಸೇವೆಯನ್ನು ಸಲ್ಲಿಸುತ್ತಿರುವ ಉದ್ಯಮಿ ಗೀತಾ ಗೋಕುಲ ಜಿ ಶೆಟ್ಟಿ ಅವರ ಹರಕೆ ಅಂಗವಾಗಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ಕಾರ್ಯಕ್ರಮದ ಪ್ರಯುಕ್ತ ಅನ್ನಸಂತರ್ಪಣೆ ಸೇವೆ ಜರುಗಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು.ವಿಜೃಂಭಣೆಯಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಬೈಟ್, ಗೀತಾ ಗೋಕುಲ ಜಿ ಶೆಟ್ಟಿ ಮಾತನಾಡಿ,ಹಲವಾರು ವರ್ಷಗಳ ಹಿಂದೆ ಹೆಳಿಕೊಂಡಿದ್ದ ಹರಕೆಯನ್ನು ನಾನಾ ಧಾರ್ಮಿಕ ಪೂಜಾ ಕಾರ್ಯಗಳೊಂದಿಗೆ ಶ್ರೀ ದೇವರ ಆರ್ಶೀವಾದದಿಂದ ಸಲ್ಲಿಸಲಾಗಿದೆ ಎಂದು ಹೇಳಿದರು.ಮೆರವಣಿಗೆ ಹಾಗೂ ಯಕ್ಷಗಾನ ವಿಜೃಂಭಣೆಯಿಂದ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.

ಬೈಟ್ ಶ್ರೀ ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಧರ್ಮಸ್ಥಳ ಅವರು ಮಾತನಾಡಿ,ಧರ್ಮಸ್ಥಳ ಮೇಳ ಸುಮಾರು 200 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಮೇಳವಾಗಿದೆ. ಕ್ಷೇತ್ರದ ದಾಖಲೆಗಳ ಪ್ರಕಾರ 1812ನೇ ಇಸವಿಯಲ್ಲಿ ಮೇಳ ಆರಂಭಗೊಂಡಿದೆ ಎನ್ನುವ ಐತಿಹ್ಯ ಇದೆ.ಭಕ್ತಾಧಿಗಳ ಬೇಡಿಕೆ ಮೇರೆಗೆ ಯಕ್ಷಗಾನವನ್ನು ಬಯಲಾಟ ರೂಪದಲ್ಲಿ ಆಡಿ ತೋರಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸೇವಾಕರ್ತರ ಕುಟುಂಬಸ್ಥರು,ಸಂಬಂಧಿಗಳು,ಹಿತೈಷಿಗಳು,ಗ್ರಾಮಸ್ಥರು ಉಪಸ್ಥೊತರಿದ್ದರು.

RELATED ARTICLES
- Advertisment -
Google search engine

Most Popular