ಬೆಳ್ತಂಗಡಿ: ತುಳುನಾಡಿನ ಸಂಪ್ರದಾಯದಂತೆ ಪ್ರತಿ ವರ್ಷವೂ ಕುರಲ್ (ತೆನೆ ತರುವ) ಹಾಕುವ ಕಾರ್ಯಕ್ರಮ ಇಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ, ಬದ್ಯಾರು-ಶಿರ್ಲಾಲುವಿನಲ್ಲಿ ನಡೆಯಿತು. ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ನಡೆಸಿ, ಕಾರ್ಯಕ್ರಮ ನಡೆಯಿತು ಈ ವೇಳೆ ಅನೇಕ ಭಕ್ತಾದಿಗಳು ಪಾಲ್ಗೊಂಡು ತೆನೆಯನ್ನು ಪ್ರಸಾದದ ರೀತಿಯಲ್ಲಿ ಅವರವರ ಮನೆಗೆ ತೆಗೆದುಕೊಂಡು ಹೋದರು. ದೇವಸ್ಥಾನದ ಪ್ರಧಾನ ಅರ್ಚಕರು ವಿಧಿವಿಧಾನಗಳನ್ನು ನೆರೆವೇರಿಸಿದರು. ಆಡಳಿತ ಮುಖ್ಯಸ್ಥರು, ಆಡಳಿತ ಸಮಿತಿಯ ಸದಸ್ಯರು, ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರು, ಸರ್ವ ಸದಸ್ಯರು ಮತ್ತು ಊರಿನ ಸಮಸ್ತ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.