ಮಲ್ಪೆ: ಕುತ್ಪಾಡಿ ಮಾಂಗೋಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಪೂರ್ವಬಾವಿಯಾಗಿ ಸಮಾಲೋಚನಾ ಸಭೆಯು ಡಿ. 1ರಂದು ದೇವಸ್ಥಾನದಲ್ಲಿ ನಡೆಯಿತು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಮುಖ್ಯ ಗಣ್ಯರಾದ ಸಾಫಲ್ಯ ಸೇವಾ ಟ್ರಸ್ಟ್ ಪ್ರವರ್ತಕ ನಿರುಪಮಾ ಪ್ರಸಾದ್ ಶೆಟ್ಟಿ ಕಾರ್ತಿಕ್ ಸಮೂಹ ಸಂಸ್ಥೆಯ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್, ವಾಮನ್ ಬಂಗೇರ, ಪ್ರದೀಪ್ ಚಂದ್ರ ಕೆ., ಸುರೇಶ್ ಪೂಜಾರಿ ಕುತ್ಪಾಡಿ, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ದೇವಸ್ಥಾನದ ವ್ಯವಸ್ಥಾಪಕ ವೇಣುಗೋಪಾಲ ಸಾಮಗ, ಸಂಗಮ ಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಕುಮಾರ್, ವಾಸುದೇವ ಭಟ್, ಗುರುಪ್ರಸಾದ್ ಭಟ್, ಸುಬ್ರಹ್ಮಣ್ಯ ಭಟ್ ಪಾಡಿಗಾರು ಉಪಸ್ಥಿತರಿದ್ದರು. ದೇವಸ್ಥಾನವನ್ನು ಸಮಗ್ರವಾಗಿ ಶಿಲಾಮಯ ನಿರ್ಮಿಸಲಾಗುವುದು, ಈ ಬಗ್ಗೆ ನೂತನ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ರಚನೆ ಮಾಡುವಂತೆ ತೀರ್ಮಾನಿಸಲಾಯಿತು.