ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ವತಿಯಿಂದ ದಿನಾಂಕ 01- 05 -2024 ರಂದು ಬೆಳಿಗ್ಗೆ 11 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿ ನಗರ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಉದ್ಘಾಟನೆಗೈದರು, ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ರವರು ಪ್ರಾಸ್ತವಿಕ ಭಾಷಣ ಮಾಡಿದರು. ಸನ್ಮಾನ ಗೊಂಡವರ ಶ್ರಮ ಜೀವನದ ಬದುಕು ಮತ್ತು ಸಾಧನೆ ಕುರಿತು ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ಮಾತನಾಡಿದರು. ಸಭೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಶ್ರಮಜೀವಿಗಳಾದ ರಮೇಶ್ ಶೆಟ್ಟಿ ಪಾದೂರು , ಮಾಧವ ಪಾಣ ಅಮ್ಮುಂಜೆ, ರವಿಂದ್ರ ಗುಜ್ಜರಬೆಟ್ಟು , ಪ್ರಕಾಶ್ ಶೆಟ್ಟಿ ಇನ್ನಂಜೆ, ಚಂದ್ರಕಾಂತ್ ಗರಡಿಮಜಲು ರವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಘಟಕ ಅಧ್ಯಕ್ಷರಾದ ಶೋಭಾ ಪಂಗಳಾ ಬ್ರಹ್ಮವರ ಘಟಕ ಅಧ್ಯಕ್ಷರಾದ ಸತೀಶ್ ಪೂಜಾರಿ, ಕಾಪು ಮಹಿಳಾದ್ಯಕ್ಷೆ ಅನುಸೂಯ ಶೆಟ್ಟಿ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಕೋಶಾಧಿಕಾರಿ ಸುನಂದ ಕೋಟ್ಯಾನ್, ಆಜರುದ್ದೀನ್ ಸುಬ್ರಹ್ಮಣ್ಯ ನಗರ, ಅವಿನಾಶ್ ಮಾಸ್ಟರ್, ಕುಶಲ್ ಅಮೀನ್, ರೋಶನ್ ಬಂಗೇರ, ಮಜೀದ್, ಗುಣವತಿ ,ಸುಕನ್ಯ , ಸಂಗೀತ ಶೆಟ್ಟಿ, ಜ್ಯೋತಿ, ಲಕ್ಷ್ಮಿ ಆದಿ ಉಡುಪಿ ,ವಿನೋದ , ಮಮತಾ, ಲಕ್ಷ್ಮಿ ಕಾಪು , ಪ್ರೀತಮ್, ಸುಲತ , ಸುರೇಂದ್ರ ಪೂಜಾರಿ, ಹಾವಂಜೆ, ಗುಣಾಕರ ಹಾವಂಜೆ, ಯೋಗೀಶ್ ಗಾಣಿಗಾ ಸುಕೇಶ್ ಪಾಣ, ಮತ್ತಿತರರು ಉಪಸ್ಥಿತರಿದ್ದರು.