Tuesday, April 22, 2025
Homeಕುಂದಾಪುರರಾಘು ರಟ್ಟಾಡಿ ಸಾರಥ್ಯದ ಕೆ.‌ಕೆ ಎಂಟಾಟೈನ್ಮೆಂಟ್ ಆಯೋಜನೆಯ ಲಹರಿ 2025 ಗಾನಗಳ ಕಲಹರಿ

ರಾಘು ರಟ್ಟಾಡಿ ಸಾರಥ್ಯದ ಕೆ.‌ಕೆ ಎಂಟಾಟೈನ್ಮೆಂಟ್ ಆಯೋಜನೆಯ ಲಹರಿ 2025 ಗಾನಗಳ ಕಲಹರಿ

ಕೋಟ: ನಮ್ಮ ನಡುವೆ ಅನೇಕ ತೆರನಾದ ಪ್ರತಿಭೆಗಳಿರುತ್ತಾರೆ. ಅಂತಹ ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ಕೆಲಸ ಸಮಾಜದಿಂದ ಅಗಬೇಕು ಎಂದು ಯಕ್ಷ ಕವಿ ಪ್ರೊ. ಪವನ್ ಕಿರಣ್ ಕೆರೆ ಅಭಿಪ್ರಾಯ ಪಟ್ಟರು.

ಅವರು ಕೆ.‌ಕೆ ಎಂಟಟೈನ್ಮೆಂಟ್ ಆಯೋಜನೆಯಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಇತ್ತೀಚೆಗೆ ಜರುಗಿದ ಲಹರಿ 2025 ಇದರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮೂಕ್ತೇಸರರಾದ ಆನಂದ ಸಿ ಕುಂದರ್ ಕೆ.‌ಕೆ. ಎಂಟಟೈನ್ಮೆಂಟ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪುಟ್ಟ ಕಥೆ- ಪುಟ್ಟಿಕಥೆ ಪೋಸ್ಟರ್ ಅನಾವರಣ ಮಾಡಿ ‘ಭಕ್ತಿ ಸಂಗೀತ ಮನಸ್ಸಿಗೆ ಅಹ್ಲಾದ ಮೂಡುವ ಶ್ರೇಷ್ಟ ಸಾಹಿತ್ಯ. ಇದರಲ್ಲಿ ರಾಘು ರಟ್ಟಾಡಿಯವರ ಕರ್ತವ್ಯ ಶ್ರೇಷ್ಟವಾದದ್ದು ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್, ಬಳ್ಮನೆ ಶ್ರೀ ಚತುರ್ಮುಖ ಬ್ರಹ್ಮಶಾರದೆ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕರುಣಾಕರ ಶೆಟ್ಟಿಗಾರ್ ಬಳ್ಮನೆ, ಆಲೂರು ಕಲ್ಪತರು ಕಲಾವಿದರು ಇದರ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರರಾಗಿರುವ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ರಾವ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಹಿನ್ನಲೆ ಗಾಯಕಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಮತ್ತು ಸುರೇಶ್ ಕುಮಾರ್ ಕಾರ್ಕಡ ಅವರಿಗೆ ಗಾನಸಿರಿ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯ್ತು. ಸಮಾಜಸೇವಕರು ಮತ್ತು ಬದುಕು ಸಂಸ್ಥೆಯ ಪ್ರಮುಖರಾದ ದಿನೇಶ್ ಪೂಜಾರಿ ನಾರ್ಕಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು..

ಕಾರ್ಯಕ್ರಮದ ಸಂಘಟಕರಾದ ಕೆ.‌ಕೆ. ರಾಘು ರಟ್ಟಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ನಮ್ಮ ಸುತ್ತ ಮುತ್ತಲಿನ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಮ್ಮಿಂದಾಗಲೇ ಎಲ್ಲಾ ಕಲಾವಿದರಿಗೂ ಅವಕಾಶ ಸಿಗುವುದು ಖಚಿತ ನುರಿತ ಕಲಾವಿದರು ಹೇಗಿದ್ದರೂ ಪ್ರಚಲಿತದಲ್ಲೇ ಇರುತ್ತಾರೆ ಎಲೆಮರೆಯ ಕಾಯಿಗಳಿಗೆ ಬೆಲೆ ಕೊಡಬೇಕಾಗಿದೆ ಅವರಿಗಾಗಿಯೇ ಒಂದಿಷ್ಟು ವೇದಿಕೆಗಳು ತಯಾರಾಗಬೇಕಿದೆ ಹಾಗಾಗಿ, ಅಂತಹ ಹೊಸ ಪ್ರತಿಭೆಗಳನ್ನೇ ಹುಡುಕಿ ಕರಾವಳಿಯ ಒಂದಷ್ಟು ದೇಗುಲಗಳ ಭಕ್ತಿ ಗೀತೆಯನ್ನು ನಮ್ಮ ಚಾನೆಲ್ ನಲ್ಲಿ ಬಿಡುಗಡೆಗೊಳಿಸುತ್ತಿದ್ದೇವೆ ಇದರಿಂದ ದೇವಾಲಯಗಳು ಕೂಡಾ ಪ್ರಚಲಿತ್ತಕ್ಕೆ ಬರುವುದು ಖಚಿತ ಎಂದರು ನಿರೂಪಕ ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular