Friday, February 14, 2025
Homeಬೆಳಗಾವಿಕಾರು ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಳ‌ರ್

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಳ‌ರ್

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಳ‌ರ್

ಬೆಳಗಾವಿ: ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ತುಸು ಗಂಭೀರವಾದ ಗಾಯವಾಗಿದೆ. ಎರಡು ಕಡೆ ಬೆನ್ನುಮೂಳೆ ಮುರಿತವಾಗಿದ್ದು, ಕನಿಷ್ಠ ಒಂದು ತಿಂಗಳು ಅತ್ತಿತ್ತ ಓಡಾಡದೆ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಚಿವೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಸಚಿವೆಯ ಸಹೋದರ, ಗನ್‌ ಮ್ಯಾನ್ ಮತ್ತು ಕಾರಿನ ಡ್ರೈವರ್ ಕೂಡ ಗಾಯಗೊಂಡಿದ್ದಾರೆ. ಎಲ್ಲರಿಗೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷ್ಮಿ ಹೆಬ್ಬಾಳ್ಳ‌ರ್ ಅವರ ಬೆನ್ನುಮೂಳೆಯ ಎಲ್1 ಎಲ್4 ಮೂಳೆಯಲ್ಲಿ ಬಲವಾದ ಪೆಟ್ಟಾಗಿದೆ.

ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಮೆದುಳು ಬಾವು ಬಂದಿದೆ. ಚಿಕಿತ್ಸೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಅವರಿಗೆ ಚಿಕಿತ್ಸೆ ನೀಡಿದ ಡಾ.ರವಿ ಪಾಟೀಲ ಮಾಹಿತಿ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಬಲವಾದ ಪೆಟ್ಟಿಗೆ ಬೆನ್ನಿನ ಮೂಳೆ ಮುರಿದಿದೆ. ಇನ್ನೆರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡ್ತೀವಿ. ಆಸ್ಪತ್ರೆಗೆ ಬಂದ ವೇಳೆ ಸ್ಥಿತಿ ಗಂಭೀರವಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಎಂಆರ್‌ಐ ಸ್ಕ್ಯಾನ್ ಮಾಡಿದ್ದೇವೆ. ಎಲ್1 ಮತ್ತು ಎಲ್4 ಮೂಳೆಗೆ ಪೆಟ್ಟಾಗಿದೆ. ಬೆನ್ನಿನ 2 ಮೂಳೆಗಳು ಮುರಿದಿವೆ. ಅವರು 1 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular