ಕೋಟ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿ ಯೊಬ್ಬರು ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ಕದ ಗ್ರಾಮದ ಅಮಿತ್(23) ಎಂಬವರಿಗೆ ಸೂರಜ್ ಶೇಖರ್ ಎಂಬಾತ ನ.10ರಂದು ಪರಿಚಯವಾಗಿದ್ದು, ಅವರು ಅಮಿತ್‌ಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನ.10ರಿಂದ ಮಾ.5ರ ಮಧ್ಯಾವಧಿಯಲ್ಲಿ ಒಟ್ಟು 5,81,300ರೂ. ಹಣವನ್ನು ಹಂತ ಹಂತವಾಗಿ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದನು. ಆದರೆ ಆತ ಅಮಿತ್‌ಗೆ ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.