ಸುರತ್ಕಲ್: ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಭಾರತೀಯ ಸೇನೆಯಲ್ಲಿ ಸೇವೆಗೈದು, ಪ್ರಸ್ತುತ ವಯನಾಡುವಿನಲ್ಲಿ ನಡೆದ ಪ್ರಕೃತಿ ವಿಕೋಪದ ಭೂಕುಸಿತ ಸಂದರ್ಭದಲ್ಲಿ ಕಬ್ಬಿಣದ ಸೇತುವೆ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮುಗಿಸುವಲ್ಲಿ ಶ್ರಮಿಸಿದ ಲ್ಯಾನ್ಸ್ ಹವಾಲ್ದಾರ್ ಬೃಜೇಶ್ ಕೆ.ಇವರಿಗೆ ಅಭಿನಂದನಾ ಕಾರ್ಯಕ್ರಮವೂ ಅವರ ಸ್ವಗೃಹದಲ್ಲಿ ನಡೆಯಿತು. ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.