ಹೈದರಾಬಾದ್: ಜಮೀನು ವಿಷಯಕ್ಕೆ ಸಂಬಂಧಿಸಿ ಸ್ವಂತ ಅಕ್ಕನ ಮೇಲೆ ತಮ್ಮ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೊವೊಂದು ವೈರಲ್ ಆಗಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನಿ ಮಂಡಲಂನ ಪೆನಕಚರ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೆನಕಚರ್ಲ ನಿವಾಸಿ ಮೆಹಬೂಬಿ ಎಂಬ ಮಹಿಳೆ ತನ್ನ ತಮ್ಮನಿಂದ ಹಲ್ಲೆಗೊಳಗಾದ ಮಹಿಳೆ. ಮಹಿಳೆಯ ಮಗಳ ಮೇಲೂ ದಾಳಿ ನಡೆದಿದೆ. ತಮ್ಮ ಜಿಲಾನಿ ಬಾಷಾ ಹಲ್ಲೆ ಮಾಡಿದ ವ್ಯಕ್ತಿ. ಮನೆಯ ಸ್ಥಳದ ವರ್ಗಾವಣೆ ವಿಚಾರವಾಗಿ ಅಕ್ಕ ತಮ್ಮನ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಇದರಿಂದ ಕೋಪಿತನಾದ ಆರೋಪಿ ಏಕಾಏಕಿ ಅಕ್ಕನ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಮಹಿಳೆ ಹಾಗೂ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.