ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೆಂಕಿಲದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ. ಶೇಖಮಲೆ, ಮಡ್ಯಂಗಲದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾದ ಎರಡೇ ದಿನದ ಅಂತರದಲ್ಲಿ ತೆಂಕಿಲದಲ್ಲೂ ಭೂ ಕುಸಿತ ಸಂಭವಿಸಿದೆ. ತೆಂಕಿಲದಲ್ಲಿ ರಸ್ತೆ ಕುಸಿತವಾದ ಕಾರಣ ಹೆದ್ದಾರಿ ಸಂಚಾರ ಬಂದ್ ಆಗಿದೆ. ಪರ್ಯಾಯ ರಸ್ತೆ ಬಳಸುವಂತೆ ಸೂಚಿಸಲಾಗಿದೆ.
ಕೆಲವು ದಿನಗಳ ಹಿಂದೆ ಸಣ್ಣಪುಟ್ಟ ಕುಸಿತಗಳಾಗಿದ್ದವು. ಆದರೆ ಇಂದು ಮುಂಜಾನೆ ಏಕಾಏಕಿ ಗುಡ್ಡ ಕುಸಿದಿದೆ. ಅತಿ ಎತ್ತರ ಹೊಂದಿರುವ ಗುಡ್ಡವಾಗಿರುವ ಕಾರಣ ಶುಕ್ರವಾರ ಮತ್ತೆ ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂರು ಜೆಸಿಬಿಗಳ ಮೂಲಕ ಬೆಳಗ್ಗಿನಿಂದ ಕಾರ್ಯಾಚರಣೆ ನಡೆಸಿ, ಮಧ್ಯಾಹ್ನ ಮೂರು ಗಂಟೆಗೆ ಮಣ್ಣು ತೆರವು ಪೂರ್ಣಗೊಳಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ಹರಿಸಿ ಕೆಸರು ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.