ಬದರಿನಾಥ: ಉತ್ತರಾಖಂಡದ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಮೋಲಿಯ ಪಾತಾಳ ಗಂಗಾ ಲಾಂಗ್ಸಿ ಸುರಂಗದ ಬಳಿ ಬುಧವಾರ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿ ಬಂದ್ ಆಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೋಶಿಮಠ-ಬದರಿನಾಥ ರಾಷ್ಟ್ರೀ ಹೆದ್ದಾರಿ 7ರಲ್ಲಿ ಈ ಮಹಾದುರಂತ ಸಂಭವಿಸಿದೆ.
ಚಮೋಲಿ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಪರ್ವತ ಕುಸಿಯುವ ರೋಚಕ ದೃಶ್ಯವೊಂದನ್ನು ಪೋಸ್ಟ್ ಮಾಡಿದ್ದಾರೆ. ಪರ್ವತದ ಮೇಲಿಂದ ಭಾರೀ ಗಾತ್ರದ ಮಣ್ಣು, ಕಲ್ಲು ಕುಸಿಯುವ ದೃಶ್ಯವಿದ್ದು, ಇದು ಹೆದ್ದಾರಿ ಮೇಲೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ಹೆದ್ದಾರಿ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಚಾರ್ ಧಾಮ್ ಪ್ರವಾಸದಲ್ಲಿರುವ ಯಾತ್ರಿಕರಿಗೆ ಭಾರೀ ತೊಂದರೆಗಳಾಗಿವೆ.
ಪರ್ವತ ಕುಸಿಯುತ್ತಿರುವ ವಿಡಿಯೊ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ…