Tuesday, March 18, 2025
Homeರಾಜ್ಯಶ್ರೇಷ್ಠ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಕಿರುಮಂಜೇಶ್ವರ ಗೃಹದಲ್ಲಿ ಅಂತಿಮ ಸಂಸ್ಕಾರ ಧಾರ್ಮಿಕ ವಿಧಿ ವಿಧಾನ

ಶ್ರೇಷ್ಠ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಕಿರುಮಂಜೇಶ್ವರ ಗೃಹದಲ್ಲಿ ಅಂತಿಮ ಸಂಸ್ಕಾರ ಧಾರ್ಮಿಕ ವಿಧಿ ವಿಧಾನ

ಬೈಂದೂರು: ಬಡಗು ತಿಟ್ಟಿನ ಪ್ರಸಿದ್ಧ ಭಾಗವತರೂ ಆದ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನವು ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಕಿರಿಮಂಜೇಶ್ವರದಲ್ಲಿ ವಾಸವಾಗಿದ್ದ ಧಾರೇಶ್ವರರು ಸುದೀರ್ಘ ಕಲಾ ಸೇವೆಯ ಮೂಲಕ ಯಕ್ಷಗಾನಕ್ಕೆ ವಿಶೇಷ ಹಾಗೂ ಅಪಾರ ಕೊಡುಗೆ ನೀಡಿದ್ದಾರೆ.
ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ. ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಧಾರೇಶ್ವರ ಅವರು ತಮ್ಮ ಸುಮಧುರ ಕಂಠ, ಪರಂಪರೆಯ ಶೈಲಿ ಹಾಗೂ ನವೀನ ರಂಗ ತಂತ್ರಗಳ ಮೂಲಕ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ತಮ್ಮ ಗಾಯನ ಧಾಟಿಯಿಂದಲೇ ನಾಡಿನ ಜನ ಮಾನಸದಲ್ಲಿ ಅಚ್ಚಾಗಿ ಉಳಿದಿದ್ದಾರೆ. ಧಾರೇಶ್ವರರು ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆಗೈದಿದ್ದರು. ಯಕ್ಷಗಾನ ಕಲಾರಂಗದಿಂದ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಧಾರೇಶ್ವರರು ತಮ್ಮ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಈ ಸಂದರ್ಭದಲ್ಲಿ ಬಂದು ಮಿತ್ರರು, ಸ್ನೇಹಿತರು ,ವಿವಿಧ ಪಕ್ಷದ ಮುಖಂಡರು, ಯಕ್ಷಗಾನ ಕಲಾವಿದರು ಕರಾವಳಿಯ ಯಕ್ಷ ಅಭಿಮಾನಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular